ಯುವ ತಲೆಮಾರಿಗೆ ಸ್ಪೂರ್ತಿಯಾಗಿರುವ ಸುಭಾಷ್ ಚಂದ್ರ ಅವರ ಬಗ್ಗೆ ಅರಿಯಲು ಈ ಕೃತಿ ಸಹಕಾರಿಯಾಗಿದೆ. ಸುಭಾಷ್ ಚಂದ್ರ ಬೋಸ್ ಅವರ ರಾಷ್ಟ್ರೀಯತೆ ಮತ್ತು ಸರ್ವಧರ್ಮ ಸಮಭಾವದ ಕುರಿತ ಅನೇಕ ವಿಚಾರಗಳು ಈ ಕೃತಿಯಲ್ಲಿವೆ. ಗಾಂಧಿ ಜೊತೆಗೆ ಬೋಸ್ ಅವರ ಒಡನಾಟದ ಕುರಿತು ಲೇಖಕರು ಬರೆದಿದ್ದಾರೆ. ರಾಷ್ಟ್ರೀಯತೆ ಬಗ್ಗೆ ಗಾಂಧಿ ಮತ್ತು ಬೋಸ್ ಅವರ ನಡುವೆ ವ್ಯತ್ಯಾಸವೇನು ಇರಲಿಲ್ಲ. ಬೋಸರು ಸ್ವಾತಂತ್ರ್‍ಯ ಹೋರಾಟಕ್ಕಾಗಿ ಸೈನ್ಯ ಕಟ್ಟಿದ್ದನ್ನು ಗಾಂಧಿಯವರು ವಿರೋಧಿಸಿರಲಿಲ್ಲ. ಎನ್ನುವ ಸ್ವಾತಂತ್ಯ್ರ ಸೇನಾನಿ ಎಚ್.ಎಸ್. ದೊರೆಸ್ವಾಮಿಯವರ ಮೆಲಕುನೋಟ ಮುನ್ನುಡಿಯಲ್ಲಿದೆ.
ಪತ್ರಕರ್ತ, ಬರಹಗಾರ ಬಿ.ಎಂ. ಹನೀಫ್ ಅವರು ಜನಿಸಿದ್ದು 1962 ಆಗಸ್ಟ್ 04ರಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೆಳ್ಳಾಯರು ಇವರ ಹುಟ್ಟೂರು. ಮಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆದ ಇವರು ಕಾನೂನು ಪದವಿ ಪಡೆದಿದ್ದಾರೆ. ಜರ್ಮನಿಯ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಕಾಲೇಜಿನಲ್ಲಿ ವಾಣಿಜ್ಯ ಪತ್ರಿಕೋದ್ಯಮ ಕೋರ್ಸ್ ಮಾಡಿದ್ದಾರೆ. ಮುಂಗಾರು ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಆರಂಭಿಸಿದ ಇವರು ಸುಧಾ ವಾರ ಪತ್ರಿಕೆ ಮುಖ್ಯಸ್ಥರಾಗಿ ದಶಕದ ಕಾಲ ಕೆಲಸ ಮಾಡಿದ್ದಾರೆ. ಪ್ರಸ್ತುತ ಪ್ರಜಾವಾಣಿಯಲ್ಲಿ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹನೀಫ್ ಅವರ ಪ್ರಮುಖ ಕೃತಿಗಳೆಂದರೆ ಅನನ್ಯ ಸಮಾಜವಾದಿ ಲೋಹಿಯಾ, ಇತಿಹಾಸ ಮತ್ತುಇಸ್ಲಾಂ, ಕತ್ತಲೆಗೆ ...
READ MORE