ಸಿಖ್ ಧರ್ಮದ ಪ್ರಚಾರಕರಾದ ಗುರು ನಾನಕ್‍ರವರ ಕುರಿತು ಬರೆದಂತಹ ಒಂದು ಅಪರೂಪದ ಪುಸ್ತಕ ಸದ್ಗುರು ನಾನಕ್ ದೇವ್. ಹದಿನೈದನೇ ಶತಮಾನದಲ್ಲಿ ಜನಿಸಿದಂತಹ ಗುರು ನಾನಕ್ ಅವರು ಭಾರತದ ಉದ್ದಗಲಕ್ಕೂ ಓಡಾಡಿ, ಭಾರತದ ಆದ್ಯಾತ್ಮಿಕ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದಂತಹ ಓರ್ವ ಮಹಾಣ್ ಧರ್ಮ ಗುರು. ಹದಿನೈದನೇ ಶತಮಾನದಲ್ಲಿ ಹಲವು ಧರ್ಮಗಳ ರಾಜರುಗಳು ಸಾಮ್ರಾಜ್ಯ ವಿಸ್ತರಣೆಯ ಹಪಾಹಪಿಯಲ್ಲಿದ್ದ ಕಾಲ. ಅಂತಹ ಕಾಲಘಟ್ಟದಲ್ಲಿ ಹೊಸತಾದಂತಹ ಒಂದು ಧರ್ಮವನ್ನು ಸ್ಥಾಪಿಸಿದ ಕೀರ್ತಿ ಗುರುನಾನಕ್ ಅವರಿಗೆ ಸಲ್ಲುತ್ತದೆ. ಧರ್ಮವನ್ನು ಸ್ಥಾಪಿಸಿದ್ದು ಮಾತ್ರವಲ್ಲದೇ, ಆ ಧರ್ಮದ ಕುರಿತು ಹಲವುಕಡೆಗಳಲ್ಲಿ ಪ್ರವಚನಗಳನ್ನು ನಡೆಸಿ ಸಾವಿರಾರು ಅನುಯಾಯಿಗಳು ಸಿಖ್ಖ್ ಧರ್ಮದೆಡೆಗೆ ಆಕರ್ಷಿತಗೊಳ್ಳುವಂತೆ ಮಾಡಿದ ಅಯಸ್ಕಾಂತೀಯ ಶಕ್ತಿ ಗುರು ನಾನಕ್ ಅವರದು. ಕೇವಲ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡ ತಮ್ಮ ಧರ್ಮದ ಬಗ್ಗೆ ಪ್ರವಚನಗಳನ್ನು ಏರ್ಪಡಿಸಿದರ ಕುರಿತಾಗಿ ಹಾಗೂ ಗುರು ನಾಣಕರ ಜೀವನದ ಕುರಿತಾಗಿ ಸೊಗಸಾಗಿ ಬರೆದಿದ್ದಾರೆ ಸೀತಾರಾಮು ಅವರು. ಅವರ ಜೀವನದ ಸುದೀರ್ಘ ಅಧ್ಯಾಗಳ ಕುರಿತು ಸವಿವರ ದಾಖಲೆಗಳೊಂದಿಗೆ ಮೂಡಿಬಂದಿರುವ ಪುಸ್ತಕ ನಿಜಕ್ಕೂ ಓದುಗರಲ್ಲಿ ಅಚ್ಚರಿಯನ್ನು ಮೂಡಿಸುತ್ತದೆ.
©2024 Book Brahma Private Limited.