‘ಸಂಪ ನಿನಾದ’ ಸಂಪ ಲಕ್ಷ್ಮೀನಾರಾಯಣ ಜೀವನ ಚರಿತ್ರೆ. 'ಸಂಪ' ಎಂದೇ ಕರೆಸಿಕೊಳ್ಳುವ ಸಂಪದ ಲಕ್ಷ್ಮೀನಾರಾಯಣ; ಖ್ಯಾತ ಚಂಡೆ-ಮೃದಂಗ ವಾದಕರು. ಜೀವನದುದ್ದಕ್ಕೂ ಗಳಿಸಿ ಉಳಿಸಿಕೊಂಡದ್ದು - ನಮ್ಮೊಳಗೊಬ್ಬನಾಗಿಯೇ ಉಳಿಯುವ, ನಮ್ಮಿಂದ ಪ್ರತ್ಯೇಕಗೊಳ್ಳದಿರುವ, ಎಂದೆಂದೂ ನಮ್ಮವನೇ ಎನ್ನಬಹುದಾದ ಒಂದು ಬಂಧುರ ಬಂಧುತ್ವವನ್ನು ಮಾತ್ರ.
ಇವರೆಂದೂ ಆರಕ್ಕೇರಲಿಲ್ಲ. ಮೂರಕ್ಕೆ ಇಳಿಯಲಿಲ್ಲ ಕೂಡ. ! ಪ್ರಾಯದ ಅನಂತರ “ಆಕಾರದಲ್ಲಿ ಕೂಡ ತಾನು ತಾನಾಗಿಯೇ ಈ "ವಿಕಾರಗಳಿಗೆ ಆಸ್ಪದ ಕೊಡದ ಸಂಪ ಸೊಂಪಾಗಿ ಸಂಪಾದಿಸಿದ್ದು ಕಲಾಸಂಪನ್ನತೆ, ಜೊತೆಗೆ ಆತ್ಮೀಯರ ಬಳಗ, ಇವರೆಂದೂ 'ಕೊಳಗ' ಮಾತನಾಡದೇ, ಸಂಬಂಧಗಳನ್ನು ಹರಿದುಕೊಳದೇ ಹೊಸ ಸಂಬಂಧಗಳಿಗೆ ತೆರೆದುಕೊಳ್ಳುತ್ತಾ ಸಾಗಿದ ಸಂಪನ್ನತೆಯ ಕುರಿತು ಬೆಳಕು ಚೆಲ್ಲುವ ಪುಸ್ತಕವಿದು
ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ...
READ MORE