ಪ್ರಖರ ವೈಚಾರಿಕ ಚಿಂತನೆ ಹಾಗೂ ಸೆಕ್ಯುಲರ್ ವಿಚಾರಧಾರೆಗೆ ಹೆಸರಾದವರು ಎ.ಕೆ. ಸುಬ್ಬಯ್ಯ. ರಾಜಕಾರಣಿಯಾಗಿ, ನ್ಯಾಯವಾದಿಯಾಗಿ, ಜನಪರ ಹೋರಾಟಗಾರರಾಗಿರುವ ಸುಬ್ಬಯ್ಯ ತಮ್ಮ ಮಾತುಗಾರಿಕೆ ಹಾಗೂ ಖಚಿತ ನಿಲುವುಗಳ ಮೂಲಕ ನಾಡಿನ ಗಮನ ಸೆಳೆದವರು. ಚಾಟಿಯೇಟಿನಂತಹ ಮಾತುಗಳಿಂದ ಮೇಲ್ಮನೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸುಬ್ಬಯ್ಯ ಅವರು ಆಡಳಿತ ಯಂತ್ರದ ಲೋಪವನ್ನು ಬಯಲಿಗೆ ಎಳೆಯುತ್ತಿದ್ದರು. ಸುಬ್ಬಯ್ಯನವರ ಜೀವನ ಚರಿತ್ರೆಯನ್ನು ಮನು ಶೆಣೈ ಅವರು ಕಟ್ಟಿಕೊಟ್ಟಿದ್ದಾರೆ.
ಸುಟ್ಟು ಬೂದಿಯಾದರೂ ಮತ್ತೆ ಹುಟ್ಟಿ ಬರುವ ಕಾಲ್ಪನಿಕ ಹಕ್ಕಿಯಂತೆ ಸುಬ್ಬಯ್ಯ ಕೂಡ ಎಲ್ಲ ಮುಗಿದು ಹೋಯಿತು ಎನ್ನುವ ದಿನಗಳಲ್ಲಿ ಫಿನಿಕ್ಸ್‌ನಂತೆ ಹಲವು ಬಾರಿ ಸಾರ್ವಜನಿಕ ಬದುಕಿಗೆ ಮರಳಿದ್ದಾರೆ. ಮನು ಶೆಣೈ ಅವರ ಕಾಳಜಿ-ಪರಿಶ್ರಮಗಳು ಗಮನಕ್ಕೆ ಬರದೇ ಇರುವುದಿಲ್ಲ.
ಲೇಖಕ, ಪತ್ರಕರ್ತ ಬಿ.ಎನ್. ಮನುಶೆಣೈ ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದವರು. 1983ರಿಂದ ಕೊಡಗು ಜಿಲ್ಲೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು 1996ರಿಂದ ಕೊಡಗು ಸಮಾಚಾರ ವಾರಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದೊಂದಿಗೆ ಸಾಹಿತ್ಯಿಕ ಒಡನಾಟವನ್ನೂ ಹೊಂದಿರುವ ಮನುಶೆಣೈ ಅವರ ಹಲವು ಲೇಖನಗಳು ಗೌರಿ ಲಂಕೇಶ್, ನೋಟ, ವಾರ್ತಾ ಭಾರತಿ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ದಿ.ಎ.ಕೆ.ಸುಬ್ಬಯ್ಯನವರ ನಿಕಟವರ್ತಿಯಾಗಿದ್ದ ಇವರು ತಮ್ಮ “ಕೊಡಗು ಸಮಾಚಾರ” ವಾರಪತ್ರಿಕೆಯಲ್ಲಿ 160 ವಾರಗಳ ಕಾಲ ವೈಚಾರಿಕ ಲೇಖನಗಳನ್ನು ಬರೆಸುವಲ್ಲಿ ಯಶಸ್ವಿಯಾಗಿದ್ದರು. ಈ ಲೇಖನಗಳನ್ನು ಸಂಪಾದಿಸಿ 2004ರಲ್ಲಿ “ಎ.ಕೆ.ಸುಬ್ಬಯ್ಯನವರ ಬಿಚ್ಚು ಮಾತುಗಳು” ಕೃತಿಯನ್ನು ...
READ MORE