‘ನಾಗಂದಿಗೆಯೊಳಗಿಂದ’ ಲೇಖಕಿ ಬಿ.ಎಂ. ರೋಹಿಣಿ ಅವರ ಜೀವನ ಕಥನ. ಜಗತ್ತಿನ ಪ್ರತಿಯೊಂದು ಭಾಷೆಯ ಸಾಹಿತ್ಯದ ಚರಿತ್ರೆಯನ್ನು ಗಮನಿಸಿದಾಗ ತಿಳಿಯುವ ಸತ್ಯವೇನೆಂದರೆ ಮನುಷ್ಯರ ಬದುಕಿನ ಹೋರಾಟಗಳನ್ನ, ಕಷ್ಟಕಾರ್ಪಣ್ಯಗಳನ್ನು ಅಂತರಂಗದ ತುಡಿತ ಮಿಡಿತಗಳನ್ನು ತವಕ ತಲ್ಲಣಗಳನ್ನು ಕಾವ್ಯ, ನಾಟಕ, ಕತೆ, ಕಾದಂಬರಿಗಳ ಮೂಲಕ ಸಾಹಿತಿಗಳು ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯ ಕೃತಿಗಳು ಅವರ ಅನುಭವೂ ಹೌದು. ಲೋಕದ ಅನುಭವವೂ ಹೌದು. ಅಷ್ಟಾದ ಮೇಲೂ ಸಾಹಿತಿಗಳು ತಮ್ಮ ಆತ್ಮಕಥಾನಕಗಳನ್ನು ಬರೆಯುವ ಅಗತ್ಯವೇನಿದೆ, ಮತ್ತು ಅದರಲ್ಲಿ ಪೂರ್ಣಸತ್ಯವನ್ನು ತೆರೆದಿಡುತ್ತಾರೆ ಎಂಬ ಖಾತ್ರಿ ಇದೆಯೇ. ಎಂಬ ಪ್ರಶ್ನೆಗಳು ಎದ್ದುನಿಂತು ಕೆಣಕುತ್ತವೆ. ಹಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಸಾಹಿತಿಗಳು ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರಗಳಲ್ಲಿ ಒಂದಷ್ಟು ಸಾಧನೆ ಮಾಡಿದ ಮಹನೀಯರು/ಮಹಿಳೆಯರು ತಮ್ಮ ಆತ್ಮಚರಿತ್ರೆಯನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಯಾವ ಕಿರೀಟವೂ, ಪ್ರಭಾವಳಿಯೂ ಇಲ್ಲದವರೂ ಕೂಡಾ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಈ ದಾಖಲೀಕರಣವು ಅಜ್ಞಾತ ಲೋಕದ ವಿಸ್ಮಯ ಹಾಗೂ ದಾರುಣ ಪರಿಸ್ಥಿತಿಯ ವಾಸ್ತವವನ್ನು ಅನಾವರಣಗೊಳಿಸಿದೆ. ಹಾಗಿರುವಾಗ ನನ್ನಂತಹ ಸಾಮಾನ್ಯ ಮಹಿಳೆಯು ತನ್ನ ಜೀವನಾನುಭವಗಳನ್ನು ಹಂಚಿಕೊಂಡಿದ್ದರಲ್ಲಿ ತಪ್ಪೇನೂ ಇಲ್ಲವೆಂಬ ಭಾವನೆ ಮೂಡಿತು ಎನ್ನುತ್ತಾರೆ ಲೇಖಕಿ ಬಿ.ಎಂ. ರೋಹಿಣಿ.
ಮಹಿಳೆಯರಿಗೆ ಗೋಡೆಯಾಚೆಗಿನ ಆಕಾಶವನ್ನು ಮಾತ್ರ ಕಾಣಲು ಸಾಧ್ಯವಾಗುತ್ತದೆ. ಯಾಕೆಂದರೆ ಮನಸ್ಸಿಯೊಳಗೆ ಕಟ್ಟಿಕೊಂಡ ಗೋಡೆಗಳು ಅದರಾಚೆ ಜಿಗಿಯಲು ಆಸ್ಪದ ನೀಡುವುದಿಲ್ಲ. ಅವರನ್ನು ತಡೆಯುತ್ತದೆ. ಆದರೂ ಮನಸ್ಸಿನ ಭಾವನೆಗಳಿಗೆ ಅನುಭವಗಳಿಗೆ ಗೋಡೆಗಳಿರುವುದಿಲ್ಲ. ಅವುಗಳು ಗೋಡೆಗಳನ್ನು ಕೆಡವಿ ಜಿಗಿಯುತ್ತವೆ. ಆ ಆಕಾಶ ವಿಸ್ತಾರವಾಗುವುದೂ ಕುಗ್ಗುವುದೂ ಅವರ ಕಣ್ಣಿನ ಸಾಮರ್ಥ್ಯ ಬೌದ್ಧಿಕ ಮಟ್ಟ ಮತ್ತು ದೃಷ್ಟಿ ಭಾಗ್ಯವನ್ನು ಅವಲಂಬಿಸಿರುತ್ತದೆ ಎನ್ನುವ ಅವರು ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯವೆಂಬ ಹಂತಗಳಿವೆ. ಈ ಜಗತ್ತಿನಿಂದ ನಿರ್ಗಮಿಸುವ ಮೊದಲು ಈ ದೀರ್ಘವಾದ ನಿರಾಶೆಯಾಗುವುದಿದೆ. ನನ್ನ ಇಷ್ಟದ ಇನ್ನೆಷ್ಟೋ ಕೆಲಸಗಳನ್ನು ಮಾಡಬೇಕೆಂಬ ಹುರುಪಿದೆ. ಆದರೆ ದೇಹ ಅದಕ್ಕೆ ಸಮ್ಮತಿಸುವುದಿಲ್ಲ. ನನ್ನ ಜೀವನದ ಇನ್ನೂ ಒಂದು ವಿಸ್ಮಯ ಗೊತ್ತೆ ನಾನು ಇಷ್ಟು ವರ್ಷ ಬದುಕುತ್ತೇನೆಂದೇ ನಾನು ಆಶಿಸಿರಲಿಲ್ಲ. ಎನ್ನುತ್ತಾ ತಮ್ಮ ಬದುಕಿನ ಕತೆಯನ್ನು ಬಿಚ್ಚಿಡುತ್ತಾರೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಪ್ರಶಸ್ತಿ ದೊರೆತಿದೆ.
ರೋಹಿಣಿ ಬಿ.ಎಂ., ಎಂ.ಎ.(ಕನ್ನಡ) ಹಿಂದಿ(ಪ್ರವೀಣ) ಶಿಕ್ಷಣ ಪಡೆದ ಇವರು ನಿವೃತ್ತ ಶಿಕ್ಷಕಿ. 1944ರ ಏಪ್ರಿಲ್ 06 ರಂದು ಬಂಗ್ರ ಮಂಜೇಶ್ವರ ಕಾಸರಗೋಡಿನಲ್ಲಿ ಜನಿಸಿದರು. ತಂದೆ ಟಿ. ಕೊಗ್ಗಪ್ಪ, ತಾಯಿ ಬಿ.ಎಂ. ದೇವಕಿ. ಈಗ ಕೇರಳಕ್ಕೆ ಸೇರಿದ ಕಾಸರಗೋಡಿನ ಬಂಗ್ರಮಂಜೇಶ್ವರದ ಬಿ.ಎಂ.ರೋಹಿಣಿ ಓದಿದ್ದು ಮಂಗಳೂರಿನಲ್ಲಿ. ಟಿ.ಸಿ.ಹೆಚ್, ತರಬೇತಿ ಪಡೆದು ಶಿಕ್ಷಕಿಯಾಗಿದ್ದವರು (1964-2002), ನಿವೃತ್ತಿಯ ನಂತರ ತುಳಿತಕ್ಕೆ ಒಳಗಾದವರ ಬದುಕು ಬವಣೆಗಳ ಅಧ್ಯಯನ ಮತ್ತು ಸಂಸ್ಕತಿ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಮಂಗಳೂರಿನ `ಡೀಡ್' ಸಂಸ್ಥೆಯ ಮೂಲಕ ವೇಶ್ಯಾಜೀವನದ ಅಧ್ಯಯನ ನಡೆಸಿದರು. ಆಮೇಲೆ ಗುಲಾಬಿ ಬಿಳಿಮಲೆಯವರ ಜೊತೆ ಸೇರಿ ದ.ಕ ಜಿಲ್ಲಾ ಮಹಿಳಾ ಕಾರ್ಮಿಕರ ಹೋರಾಟವನ್ನು ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2019