ಹುಯಿಲಗೋಳ ನಾರಾಯಣರಾಯರು ತಮ್ಮ ಜೀವನದುದ್ದಕ್ಕೂ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ನಾಡಹಬ್ಬ, ಪುಸ್ತಕ ಬಿಡುಗಡೆ, ಕಾವ್ಯ ವಾಚನ, ಸಾಹಿತ್ಯ ಸಮ್ಮೇಳನಗಳಲ್ಲಿ ಸದಾ ಉಪಸ್ಥಿತಿಯಾಗುತ್ತಿದ್ದವರು. ನಾಟಕ, ಗದ್ಯ, ಪದ್ಯ, ಪ್ರಬಂಧ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಅವರು ಸ್ವಾಗತ ಗೀತೆಗಳನ್ನು ಬರೆದು ತಾವೇ ಖುದ್ದಾಗಿ ಹಾಡಿ ಜನರ ಮೆಚ್ಚುಗೆ ಪಾತ್ರರಾದವರು. ಇವರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ಕರ್ನಾಟಕದ ನಾಡಗೀತೆಯಷ್ಟೇ ಮಹತ್ವದ್ದು. ಇವರ ಬದುಕನ್ನು, ಜೀವನ ಸಾಧನೆಯನ್ನು ಲೇಖಕ ಸಂಪದಾ ಸುಭಾಷ್ ಈ ಕೃತಿಯಲ್ಲಿ ವಿವರಿಸಿದ್ದಾರೆ.