ಬಿ.ಎಂ. ಶ್ರೀಕಂಠಯ್ಯರವರ ಜೀವನ ಮತ್ತು ಸಾಹಿತ್ಯವನ್ನು ಟಿ.ಎಸ್.ದಕ್ಷಿಣಾಮೂರ್ತಿ ಅವರು ಈ ಕೃತಿಯ ಮೂಲಕ ಓದುಗರ ಮುಂದೆ ಇಟ್ಟಿದ್ದಾರೆ. ಸೃಜಶೀಲ ಸಾಹಿತ್ಯದ ಕೃತಿಗಳು, ಕನ್ನಡಕ್ಕಾಗಿ ಮಾಡಿದ ಸೇವೆ, ನಾಡುನುಡಿಗಾಗಿ ನಡೆಸಿದ ಹೋರಾಟ, ಆಧುನಿಕ ಕನ್ನಡವನ್ನು ಸಜ್ಜುಗೊಳಿಸಲು ಕೈಗೊಂಡ ಕ್ರಮಗಳ ಜೊತೆಗೆ ಅವರ ಸೃಜನಶೀಲ ವ್ಯಕ್ತಿತ್ವವನ್ನು ಲೇಖಕರು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.
ಟಿ.ಎಸ್.ದಕ್ಷಿಣಾಮೂರ್ತಿ ಅವರು ಚಿಕ್ಕನಾಯಕನಹಳ್ಳಿ ತಾಲೂಕು ತರಬೇನಹಳ್ಳಿ ಗ್ರಾಮದ ಇವರು ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಅವರು ಕೆಲಕಾಲ ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಆಗಿದ್ದರು. ಕಪ್ಪು ಸೂರ್ಯ ಅನುವಾದಿತ ಕಾದಂಬರಿ, ಅಕಾಡೆಮಿಯ ಒಳಗು ಹೊರಗು, ಅನುಭವ ಕಥನ ಹಾಗೂ ಸಾಹಿತ್ಯ ಲೋಕದಲ್ಲೊಂದು ಸುತ್ತು ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ...
READ MORE