ಹಳ್ಳಿ ಹೈದ ಡಾ. ಭದ್ರಾವತಿ ರಾಮಚಾರಿ ಅವರ ಕೃತಿಯಾಗಿದೆ. ಈ ಕೃತಿಯು ದೊಡ್ಡ ರಂಗೇಗೌಡರ ಜೀವನ ಚರಿತ್ರೆಯನ್ನು ಒಳಗೊಂಡದಿದೆ. ದೊಡ್ಡರಂಗೇಗೌಡರು ಕವಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ನಾಡಿನಾದ್ಯಂತ ನಾಡಿನಾಚೆ ದೇಶ ವಿದೇಶಗಳಲ್ಲಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಪೀತ್ಯಾದರಗಳಿಂದಾಗಿಯೇ ಮತ್ತೆ ದೊಡ್ಡ ಪ್ರಮಾಣದ ಅಭಿನಂದನೆ, ಸನ್ಮಾನ ಗೌರವಾರ್ಪಣೆಗಳು ಆಗುತ್ತಲೇ ಇವೆ. ಹೀಗೆ ಗೌಡರ ಕುರಿತ ಇಂತಹ ವಿಚಾರಗಳನ್ನು ಲೇಖಕ ವಿವರವಾಗಿ ತಿಳಿಸಿದ್ದಾರೆ ಎಂದು ಡಾ. ಬೈರ ಮಂಗಲ ರಾಮೇಗೌಡ ಪುಸ್ತಕದ ಮುನ್ನುಡಿಯಲ್ಲಿ ಹೇಳಿದ್ದಾರೆ.
ಲೇಖಕ ಡಾ. ಭದ್ರಾವತಿ ರಾಮಾಚಾರಿ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ (ಜನನ: 09-08-1972) ತಾಲೂಕಿನ ಬೊಮ್ಮನಕಟ್ಟೆ ಗ್ರಾಮದವರು. ತಂದೆ ವೀರಾಚಾರಿ, ತಾಯಿ ಪಾರ್ವತಮ್ಮ, ಕನ್ನಡದಲ್ಲಿ ಎಂ.ಎ. ಪದವೀಧರರು. ಕೃತಿಗಳು: ಚೈತ್ರ ತಂದ ಚಿಗುರು, ಹರಕೆ, ನೆನಪೊಂದೇ ಶಾಶ್ವತ, ಭಾವನದೀ, ಅಮ್ಮಾ...ನನ್ನನ್ನೂ ಸ್ವಲ್ಪ ಅರ್ಥ ಮಾಡ್ಕೋ, ಆಶಾಕಿರಣ(ಇವು ಕಾದಂಬರಿಗಳು), ದೀಪ ಹಚ್ಚುವ ಸಮಯ(ಕಥಾಸಂಕಲನ), ಆಶಾ ಕಿರಣ(ಮಕ್ಕಳ ಕಾದಂಬರಿ), ಅಭಿರಾಮಿ ಮತ್ತು ಇತರ ಕಥೆಗಳು, ನಮ್ಮ ಬದುಕಿನ ಸುತ್ತ, ಕನಸುಗಳು ನೂರಾರು, ಹೊಸ ಚಿಗುರು(ಸಂಪಾದಿತ ಕೃತಿ), ತುಂತುರು ಮಳೆ ಹನಿ(ಸಂಪಾದಿತ ಕೃತಿ), ಪಯಣಿಗರು, ಬೆಳಕು ನೀನಾದೆ, ಬೇವರ್ಸಿ ಬರೆದ ಕಥೆಗಳು (ಇವು ಕಥಾ ಸಂಕಲನಗಳು), ಭದ್ರಾವತಿ ಆಕಾಶವಾಣಿಯಿಂದ 12 ಕಥೆಗಳು, ರಶ್ಮಿ, ಸಂದರ್ಶನ, ನಾಟಕಗಳು ಪ್ರಸಾರವಾಗಿವೆ. ಸುವರ್ಣ ಸ್ವಾತಂತ್ರ್ಯ ನಾಟಕ ರಚನೆ, ಕರ್ನಾಟಕd ಎಲ್ಲ ಬಾನುಲಿ ...
READ MORE