ಕಾವ್ಯ, ಆತ್ಮಕಥನ, ಸಂಶೋಧನೆ, ಜನಪದ ಸಾಹಿತ್ಯ ಇತ್ಯಾದಿ ಪ್ರಕಾರಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿದ್ದು ಮಧುರಚೆನ್ನರು ಮಾಡಿದ ಸಾಧನೆ ಸ್ಮರಣೀಯವಾದುದು.
ಹಲಸಂಗಿ ಗೆಳೆಯರು ಸಾಹಿತ್ಯ ಸೌಕರ್ಯಗಳಿಂದ ದೂರವಿದ್ದೂ, ಸ್ವಪ್ರಯತ್ನದಿಂದ, ಶ್ರದ್ಧೆಯಿಂದ, ಸಮರ್ಪಣಾಭಾವದಿಂದ, ಸಾಂಸ್ಕೃತಿಕ ಕಾಳಜಿಯಿಂದ ಮಾಡಿದ ಕಾರ್ಯ ಸಾಹಿತ್ಯ ಚರಿತ್ರೆಯಲ್ಲಿ ದಾಖಲೆಯಾಗುವಂತಾದ್ದು, ಹಲಸಂಗಿಯ ಗೆಳೆಯರ ನೇತಾರರಾದ ಮಧುರಚೆನ್ನರನ್ನು ಸಂಕ್ಷಿಪ್ತವಾಗಿ ಹಾಗೂ ಖಚಿತವಾಗಿ ಕವಿ ಚನ್ನವೀರ ಕಣವಿಯವರು ಪರಿಚಯಿಸಿರುವ ಕೃತಿ ಇದು.
‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...
READ MORE