ಅಲೆಗ್ಸಾಂಡರ್ ಪ್ಲೆಮಿಂಗ್

Author : ನಾ. ಸೋಮೇಶ್ವರ

Pages 528

₹ 48.00




Year of Publication: 1999
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560100
Phone: 080-22107802

Synopsys

ಸ್ಕಾಟ್‌ಲೆಂಡ್‌ ಮೂಲದ ಅಲೆಗ್ಸಾಂಡರ್‌ ಪ್ಲೆಮಿಂಗ್‌ ಹೆಸರಾಂತ ಜೀವವಿಜ್ಞಾನಿ ಮತ್ತು  ಔಷಧ ವಿಜ್ಞಾನಿಯಾಗಿದ್ದರು. ವೈದ್ಯಕೀಯ ಲೋಕಕ್ಕೆ ಪೆನ್ಸಿಲಿನ್ ಎಂಬ ಪ್ರತಿಜೀವಕ (ಆಂಟಿಬಯೋಟಿಕ್‌) ನೀಡಿದ ಕೊಡುಗೆ ಪ್ಲೆಮಿಂಗ್ ಅವರದು. ಪ್ಲೆಮಿಂಗ್‌ಗೆ ಶರೀರವಿಜ್ಞಾನ ಶಾಸ್ತ್ರ ಹಾಗೂ ವೈದ್ಯಕೀಯ ಶಾಸ್ತ್ರಕ್ಕಾಗಿ ನೋಬೆಲ್ ಪ್ರಶಸ್ತಿ ದೊರಕಿತ್ತು. 20ನೇ ಶತಮಾನದ ಅತಿಪ್ರಮುಖ ನೂರು ಜನರ ಪಟ್ಟಿಯಲ್ಲಿ ಪ್ಲೆಮಿಂಗ್‌ ಅವರ ಹೆಸರಿತ್ತು. ಪ್ಲೆಮಿಂಗ್‌ ಅವರ ಜೀವನ ಮತ್ತು ಸಾಧನೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಡಾ. ನಾ. ಸೋಮೇಶ್ವರ ಅವರ ಸೊಗಸಾದ ನಿರೂಪಣೆ ಪುಸ್ತಕದ ವಿಶೇಷ.

About the Author

ನಾ. ಸೋಮೇಶ್ವರ
(14 May 1955)

ನಾ. ಸೋಮೇಶ್ವರ  ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.  ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ  ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...

READ MORE

Related Books