ಕೇರಳದ ಬಹುದೊಡ್ಡ ರಾಜಕೀಯ ನಾಯಕ ಇಎಂಎಸ್ ನಂಬೂದರಿಪಾಡ್ ಅವರ ಬದುಕಿನ ಚಿತ್ರಣ ಒದಗಿಸುವ ಕೃತಿ ಇದು.
ಕೇರಳದ ಮತ್ತೊಬ್ಬ ಹಿರಿಯ ಚಿಂತಕ ವಿಜಿಕೆ ನಾಯರ್ ಅವರಿ ನಂಬೂದರಿಪಾಡ್ ಅವರನ್ನು ಕೃತಿಯ ಬೆನ್ನುಡಿಯಲ್ಲಿ ಹೀಗೆ ಸ್ಮರಿಸಿದ್ದಾರೆ: ಎಳಂಕುಳಂ ಮನಕ್ಕಳ್ ಶಂಕರನ್ ನಂಬೂದಿರಿಪಾಡ್ ಸುಮಾರಾಗಿ ಸಮಸ್ತ ಇಪ್ಪತ್ತನೇ ಶತಮಾನವನ್ನು ಆವರಿಸಿದ ತನ್ನ ಬದುಕಿನ ಅವಧಿಯಲ್ಲಿಯೇ ದಂತಕಥೆಯಾದವರು. ಅವರೊಬ್ಬ ಸಾಮಾಜಿಕ ಸುಧಾರಕರು ಕೂಡಾ- ಮೊದಲು ತಾನು ಹುಟ್ಟಿದ ಸಮುದಾಯದ ಸವಾಲುಗಳನ್ನು ಎದುರಿಸಿ ಅದನ್ನು ಒಳಗಿನಿಂದಲೇ ರೂಪಿಸಿದವರು, ನಂತರ ಅದರಿಂದ ಪ್ರಯೋಜನ ಪಡೆದು ಸಾಮಾಜಿಕ ಸುಧಾರಣೆಯ ಓಘವನ್ನು ಮತ್ತಷ್ಟು ಮುಂದೆ ಒಯ್ದವರು. ಅವರು ಇಪ್ಪತ್ತನೇ ಶತಮಾನದ ಸಾಮಾಜಿಕ ಬದಲಾವಣೆಯ (ಲೆನಿನ್ ನಿರೂಪಿಸಿದ) ಎರಡು ಧಾರೆಗಳಾದ ರಾಷ್ಟ್ರೀಯ ವಿಮೋಚನಾ ಆಂದೋಲನ ಮತ್ತು ಸಮಾಜವಾದಿ ಆಂದೋಲನವನ್ನು ಬೆಸೆದವರಷ್ಟೇ ಅಲ್ಲ, ಸಾಮಾಜಿಕ ಸುಧಾರಣೆಯನ್ನೂ ಅದರೊಂದಿಗೆ ಬೆಸೆದವರು, ಜತೆಗೆ ತಾನು ಬದುಕಿದ್ದ ಸಮಾಜದ ಸಾಮಾಜಿಕ-ಆರ್ಥಿಕ ವಿಶ್ಲೇಷಣೆಯನ್ನು ಮಾಡಿದವರು. ಇವೆಲ್ಲಾ ಪರಸ್ಪರ ಸಂಬಂಧಿಸಿದವುಗಳು, ಅದಕ್ಕಿಂತಲೂ ಹೆಚ್ಚಾಗಿ ಪರಸ್ಪರ ಬೆಸೆದುಕೊಂಡಿರುವ ಸಂಗತಿಗಳು, ರಾಷ್ಟ್ರೀಯ ವಿಮೋಚನೆ ಮತ್ತು ಸಮಾಜವಾದೀ ಆಂದೋಲನದ ಗುರಿಸಾಧನೆಗೆ ಬೇಕಾದ ಸಂಗತಿಗಳು. ಇಎಂಎಸ್ ತನ್ನ ಪಭಾವದ ವಲಯದಲ್ಲಿ ಇವೆರಡನ್ನೂ ಸಾಧಿಸಿದರು’.
©2024 Book Brahma Private Limited.