ಪ್ರೊ. ಡಿ.ಎಲ್ ನಾಗಭೂಷಣ ಅವರ ‘ಗಾಂಧಿ ಕಥನ’ ಪುಸ್ತಕವು ಲೇಖನ ಬರಹಗಳ ಸಂಕಲನವಾಗಿದೆ. ಈ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರುತ್ತದೆ. ಗಾಂಧಿಯುಜಗತ್ತನ್ನು ಯಾವ ದೃಷ್ಟಿಯಿಂದ ನೋಡಿದ್ದಾರೆ ಎಂಬ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಇಲ್ಲಿನ ಶೀರ್ಷಿಕೆಗಳು ಪ್ರತಿಯೊಂದು ವಿಷಯವನ್ನು ಕೂಡ ಅಚ್ಚುಕಟ್ಟಾಗಿ ವಿಶ್ಲೇಷಿಸುತ್ತಾ ಓದುಗರಿಗೆ ಗಾಂಧಿಯ ತತ್ವಗಳನ್ನು ಅರಿವು ಮೂಡಿಸುತ್ತದೆ. ಬನಾರಸ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣ, ಅನೇಕ ವೇದಿಕೆಗಳಲ್ಲಿ ಗಾಂಧೀಜಿಗೆ ಆದಂತಹ ಅವಮಾನ, ಹೊಗಳಿಕೆ ತೆಗಳಿಕೆ ಇವೆಲ್ಲವನ್ನೂ ಈ ಕೃತಿಯು ಕಟ್ಟಿಕೊಟ್ಟಿದೆ.
ಗಾಂಧಿ, ಜಿನ್ನಾ, ನೆಹರೂ, ಗೋಖಲೆ, ರಾಜಗೋಪಾಲ್ ಚಾರಿ, ಸಬರಮತಿ ಆಶ್ರಮ, ಇತ್ಯಾದಿ ವಿಚಾರಗಳಿಂದ ಈ ಕೃತಿಯು ಗಾಂಧಿ ವಿಚಾರ ಧಾರೆಗಳನ್ನು ಮತ್ತಷ್ಟು ಎತ್ತಿ ಹಿಡಿಯುವಂತಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ಶ್ರೇಷ್ಠ ವ್ಯಕ್ತಿಗಳು ಗಾಂಧಿ ಕುರಿತಂತೆ ಹೇಳಿದ ಮಾತುಗಳು ಇಲ್ಲಿವೆ.
ಇಂತಹ ಒಂದು ಚೈತನ್ಯ ದೇಹಧಾರಿಯಾಗಿ ಈ ಭೂಮಿಯ ಮೇಲೆ ನಡೆದಾಡಿತ್ತು ಎಂದು ಮುಂದಿನ ಜನಾಂಗ ನಂಬಲಾರದಂತಹ ವ್ಯಕ್ತಿ ಗಾಂಧಿ (ಅಲ್ಬರ್ಟ್ ಐನ್ ಸ್ಟೀನ್ ), ಗಾಂಧಿ ಈ ಜಗತ್ತಿನ ಜೀವಸತ್ವ, ಅವರಿಲ್ಲದ ಜಗತ್ತು ಇಳಿಯದು (ಮಾರ್ಟಿನ್ ಲೂಥರ್ ಕಿಂಗ್), ದುಃಖಭರಿತ ಜಗತ್ತಿಗೆ ಸುಖ ಶಾಂತಿಗಳ ಭರವಸೆಯ ಪ್ರತಿರೂಪವಾದವರು (ಪರ್ಲ್ ಎಸ್ ಬಕ್).
©2024 Book Brahma Private Limited.