ಜ್ಯೋತಿಬಾ ಫುಲೆ ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ, ದೀನ ದಲಿತ ಹಿಂದುಳಿದ ವರ್ಗಗಳ ಏಳಿಗೆಗಾಗಿ, ಅವಿರತವಾಗಿ ಶ್ರಮಿಸಿದವರು. ಇವರು ಜನಸಾಮಾನ್ಯರು ಡಾಂಭಿಕ ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ, ಯಾವುದೇ ಢಾಂಭಿಕ ಭಕ್ತಿಗೆ ಒಳಗಾಗದೆ ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಪಣತೊಟ್ಟವರು. ಅಂಬೇಡ್ಕರ್‌ರವರ ಸಾಮಾಜಿಕ ಹೋರಾಟದ ಗುರು ಎಂದೇ ಗುರುತಿಸಲ್ಪಡುವ ಮಹಾತ್ಮ ಜ್ಯೋತಿಬಾ ಫುಲೆಯವರು ಶೂದ್ರ ದಮನಿತ ಸಮುದಾಯಗಳ ಜಾಗೃತಿಗೆ ಮಹತ್ವದ ಕೊಡುಗೆಯನ್ನು ನೀಡಿದ ಇವರು ಮಹರಾಷ್ಟ್ರದ ಸಾಮಾಜಿಕ ಕ್ರಾಂತಿಯಲ್ಲಿ ಪ್ರಮುಖರಾಗಿ ಗುರುತಿಸಿಕೊಂಡವರು. ಕರ್ನಾಟಕದ ಆಧುನಿಕ ಮನಸ್ಥಿತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಪೆರಿಯಾರ್, ನಾರಾಯಣ ಗುರು, ಅಂಬೇಡ್ಕರ್ ಪ್ರಭಾವಗಳ ಜೊತೆಗೆ ಮಹಾತ್ಮರಾದ ಜ್ಯೋತಿಭಾ ಫುಲೆಯವರು ಕೂಡ ಅವಿಸ್ಮಾರಣೀಯ ಕೊಡುಗೆಯನ್ನು ನೀಡಿದ್ದಾರೆ. ಮಹಿಳೆಯರ ಧ್ವನಿಯಾಗಿ ಮಹಿಳೆಯರು ಮತ್ತು ದಲಿತರ ಉದ್ಧರಕ್ಕಾಗಿ ಹಲವು ವಿವಿಧ ಆಯಾಮಗಳನ್ನು, ಹಲವು ಕಂದಚಾರಗಳನ್ನು ಹಿಮ್ಮೆಟಿಸಿ , ಮಹಿಳೆಯರಿಗೆ ಶಿಕ್ಷಣ ನೀಡಬೇಕೆಂದು ಪಣತೊಟ್ಟು, ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಈ ಮೂಲಕ ಶಿಕ್ಷಣ ಕ್ರಾಂತಿಯನ್ನು ಬರೆದವರು. ಇವರ ಬದುಕನ್ನು , ಜೀವನ ಸಾಧನೆಯನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಬಾಗಲಕೋಟ ಜಿಲ್ಲೆಯ ಹುನಗುಂದದಲ್ಲಿ ಜನಿಸಿದ ಸದಾಶಿವ ಮರ್ಜಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆರಂಭದಲ್ಲಿ ನವನಾಡು ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲ ಕಾಲ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಕವಿವಿಯಲ್ಲಿ ರೀಡರ್ ಆಗಿ ಕೆಲಸ ಮಾಡಿರುವ ಅವರು 1997ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ 'ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಂಷ ನಿರ್ದೇಶಕರಾಗಿ ನೇಮಕವಾದರು. ಈಗ ಧಾರವಾಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, 'ಮಹಾತ್ಮ ಜ್ಯೋತಿ ಬಾಫುಲೆ- ಸಾಮಾಜಿಕ ಚಳುವಳಿಯ ಪಿತಾಮಹ', 'ದಲಿತರ ಮೇಲಿನ ದೌರ್ಜಗಳು ಅವರ ಪ್ರಕಟಿತ ಕೃತಿಗಳಾಗಿವೆ. ಅವರ ಸಂಶೋಧನಾ ...
READ MORE