ಕೆ.ವಿ. ರಮೇಶ್, ಶಾಸನ ಸಂಶೋಧಕ, ಇತಿಹಾಸ ತಜ್ಞ, ಸಂಸ್ಕೃತ ವಿದ್ವಾಂಸ, ಲಿಪಿಶಾಸ್ತ್ರಜ್ಞ ನಾಣ್ಯಶಾಸ್ತ್ರ, ಮತ್ತು ಭಾಷಾತಜ್ಞರೂ ಆಗಿದ್ದರು. ಕರ್ನಾಟಕದಲ್ಲಿ ಹಲವಾರು ಅಶೋಕನ ಶಾಸನಗಳು ದೊರೆತಿದ್ದರೂ ಸನ್ನತಿಯಲ್ಲಿನ ಶಾಸನಗಳ ಜೊತೆಗೆ, ಕ್ರಿ.ಪೂ. 3ನೇ ಶತಮಾನದ ಬೌದ್ಧ ಸ್ತೂಪದ ಅವಶೇಷಗಳ ಪತ್ತೆಗೆ ನಾಂದಿ ಹಾಡಿದವರು. ವಿವಾದಾತ್ಮಕ ಬಾಬರೀ ಮಸೀದಿ ಮೊಕದ್ದಮೆಯಲ್ಲಿ ಕಟ್ಟಡ ಸಂರಚನೆಯ ಬಗೆಗೆ ನೀಡಿದ ಮೌಲಿಕ ಅಭಿಪ್ರಾಯ ಅವರಿಗೆ ರಾಷ್ಟ್ರಮಟ್ಟದಲ್ಲಿ ಗೌರವ ತಂದುಕೊಟ್ಟಿದೆ. ಲೇಖಕರ ಇವರ ಪರಿಚಯವನ್ನು ಇಲ್ಲಿ ಮಾಡಿದ್ದಾರೆ. ಲೇಖಕಿ ದೀಪಿಕಾ ಸಾವಿತ್ರಿ ಅವರು ಕೆ ವಿ ರಮೇಶ್ ಅವರನ್ನು ಪ್ರಸ್ತುತ ಕೃತಿ ಮೂಲಕ ಪರಿಚಯಿಸಿದ್ದಾರೆ.