‘ಗಿರಿಜಾ ಪರಸಂಗ’ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಅವರ ಜೀವನ ಚರಿತ್ರೆ. ರಂಗಭೂಮಿಯಿಂದ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿ, ಕಿರುತೆರೆ, ಹಿರಿತೆರೆಗಳಲ್ಲೂ ಅತ್ಯುತ್ತಮ ಕಲಾವಿದೆಯಾಗಿ ಇಂದಿಗೂ ಜನರ ಕಣ್ಣಲ್ಲಿ ಗಿರಿಜಮ್ಮನಾಗಿ, ಇಡೀ ಕುಟುಂಬವನ್ನು ಕಲೆಯ ತವರಾಗಿಸಿರುವ ಗಿರಿಜಾ ಲೋಕೇಶ್ ಅವರ ಅರ್ಥಪೂರ್ಣ ಬದುಕಿನ ವಿವರಗಳನ್ನು ಲೇಖಕ ಜೋಗಿಯವರು ನಿರೂಪಿಸಿದ್ದಾರೆ. ಹಿರಿಯ ಕಲಾವಿದ ಲೋಕೇಶ್ ಅವರೊಂದಿಗೆ ಬದುಕು ಕಟ್ಟಿಕೊಂಡು ಕಲಾಸೇವೆಯನ್ನು ಮುಂದುವರೆಸಿದ ಗಿರಿಜಮ್ಮನ ಬಣ್ಣದ ನೆನಪುಗಳು ಕನ್ನಡ ರಂಗಭೂಮಿ ಮತ್ತು ಕಲಾಜಗತ್ತಿನ ಸುಂದರ ನೆನಪುಗಳನ್ನು ಜೀವಂತಗೊಳಿಸುತ್ತವೆ. ಕಲೆಯೊಂದಿಗೆ ಸಾಗಿದ ಗಿರಿಜಾ ಲೋಕೇಶ್ ಅವರ ಬದುಕಿನ ವಿವರಣಗಳನ್ನು ಅರ್ಥವತ್ತಾಗಿ ಚಿತ್ರಿಸಿರುವ ಕೃತಿ ‘ಗಿರಿಜಾ ಪರಸಂಗ’.
ಜೋಗಿ, ಜಾನಕಿ, ಎಚ್. ಗಿರೀಶ್ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್ ರಾವ್ ಹತ್ವಾರ್ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್ 16ರಂದು. ಮೂಲತಃ ಸೂರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಯ್ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...
READ MORE