ಕಲಾಂ ಜೀವನ ಧರ್ಮ

Author : ಜಯಪ್ರಕಾಶ್ ಪುತ್ತೂರು

Pages 148

₹ 100.00




Year of Publication: 2018
Published by: ಸಪ್ನ ಬುಕ್ ಹೌಸ್
Address: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು

Synopsys

ಚಿಕ್ಕ ಮಕ್ಕಳಿಂದ ಆರಂಭವಾಗಿ ಐಐಟಿ, ಐಐಎಂ ವಿದ್ಯಾರ್ಥಿಗಳಿಗೆಲ್ಲರಿಗೂ ಅಚ್ಚುಮೆಚ್ಚಿನ ಗುರು, ಶಿಕ್ಷಕ. ಸಹನೆ, ಸರಳತೆ, ಸಜ್ಜನಿಕೆಗೆ ಅತ್ಯುತ್ತಮ ಉದಾಹರಣೆ. ಅವರು ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. ಭಾರತದ ಮಿಸ್ಸೈಲ್ ಮ್ಯಾನ್, ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ.ಅವರ ಕುರಿತು ಈ ಪುಸ್ತಕ ರಚಿಸಲಾಗಿದೆ. 'ಕಲಾಂ ಜೀವನ ಧರ್ಮ' ಎನ್ನುವ ಈ ಪುಸ್ತಕದಲ್ಲಿ ಕಲಾಂ ಬ್ಯಾಗ್ ಮತ್ತು ಬೆಂಗಳೂರು ಪ್ರವಾಸ, ಹಾಸ್ಟೆಲ್ ರೂಮ್‌ನಲ್ಲಿ ವಾಸ - ಹೀಗೆ 39 ಪುಟ್ಟಪುಟ್ಟ ಅಧ್ಯಾಯಗಳಿದ್ದು ಪುಸ್ತಕ ಕುತೂಹಲಕರವಾಗಿವೆ.ಲೇಖಕರ ತಾಯಿ ಮೃತಪಟ್ಟ ಸಂದರ್ಭದಲ್ಲಿ ಕಲಾಂ ಸ್ಪಂದಿಸಿದ ಬಗೆ ಎಲ್ಲರಿಗೂ ಮಾದರಿ. ತಮ್ಮ ಸಾವಿರಾರು ಸಿಬ್ಬಂದಿ ವರ್ಗದಲ್ಲಿ ಒಬ್ಬ ಕಿರಿಯ ಅಧಿಕಾರಿಯ ನೋವಿಗೆ ಮಿಡಿವ ಕಲಾಂರ ಹೃದಯ ಶ್ರೀಮಂತಿಕೆಯನ್ನ ಈ ಪುಸ್ತಕದಲ್ಲಿ ನಮೂದಿಸಲಾಗಿದೆ.

About the Author

ಜಯಪ್ರಕಾಶ್ ಪುತ್ತೂರು

ಜಯಪ್ರಕಾಶ್ ಪುತ್ತೂರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು. ನಂತರ ಅದನ್ನು ರಕ್ಷಣಾವಲಯದ ಪ್ರತಿಷ್ಠಿತ ಎ.ಡಿ.ಎ ಮತ್ತು ಡಿ.ಆರ್.ಡಿ.ಓ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ ಉದ್ಯೋಗಕ್ಕೆ ಸೇರಿದರು. ರಕ್ಷಣಾ ವೈಮಾನಿಕ ಅಭಿವೃದ್ಧಿ ಸಂಶೋಧನೆಗಳಿಗೆ ಮೀಸಲಾದ ಎಡಿಎ ಕೆಲಸದಲ್ಲಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ನಿಕಟವಾಗಿ ಕೆಲಸ ಮಾಡಿದ್ದು ಅವರ ಹೆಗ್ಗಳಕೆ. ‘ಕಲಾಂ ಜೀವನ ಧರ್ಮ’, ‘ಅಗ್ನಿಯ ರೆಕ್ಕೆಗಳು’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books