ವಿಮಲಾ ರಂಗಾಚಾರ್ ನಾಡಿನ ಪ್ರಮುಖ ಮಹಿಳಾ ಸಂಸ್ಕೃತಿ ಚಿಂತಕಿ. ಶಿಕ್ಷಣ ತಜ್ಞೆ ಹಾಗೂ ಸಮಾಜ ಸೇವಕಿಯಾಗಿಯೂ ಅನನ್ಯ ಸೇವೆ ಸಲ್ಲಿಸಿದ್ದಾರೆ. ನಗರದ ಎಂಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕಿಯಾಗಿ, ಕರ್ನಾಟಕ ಸಂಸ್ಕೃತಿಯ ರಾಯಭಾರಿಯಾಗಿ ಕಲಾ ವ್ಯಕ್ತಿತ್ವವುಳ್ಳ ಸಂಘಜೀವಿ ಮತ್ತು ಎ.ಡಿ.ಎ ರಂಗಮಂದಿರದ ಕಾರ್ಯದರ್ಶಿಯಾಗಿ ತಮ್ಮ ಕಲಾತ್ಮಕ ಸೇವೆಯನ್ನು ಸಮಾಜಕ್ಕೆ ನೀಡಿದ್ದಾರೆ. ಕಲಾತ್ಮಕ ಪ್ರತಿಭೆ ಹಾಗೂ ಸಾಂಸ್ಕೃತಿಕ ರಂಗದ ಸದಸ್ಯೆಯಾಗಿ ಇವರು ನಡೆದು ಬಂದ ಹಾದಿಯನ್ನು ಸಂಪಾದಿಸಿ ಎಂ.ಎ ಜಯರಾಮರಾವ್ ಪುಸ್ತಕ ರೂಪದಲ್ಲಿ ನೀಡಿದ್ದಾರೆ.
ಲೇಖಕರು ಓರ್ವ ಖ್ಯಾತ ಗಮಕ ವಿದ್ವಾನ್ ಆಗಿದ್ದು, 67 ವರ್ಷಗಳಷ್ಟು ಸುಧೀರ್ಘ ಗಮಕಿಯಾಗಿ ಸೇವೆ ಸಲ್ಲಿಸಿದವರು. ಇವರು ಗಮಕ ಕಲೆಯ ವಾಚನ ವ್ಯಾಖ್ಯಾನದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದರೂ, ಸಂಗೀತ ಕ್ಷೇತ್ರದಲ್ಲಿ ಅಪಾರವಾದ ವಿದ್ವತ್ತನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದರೂ ಅವರ ವಿದ್ಯಾಭ್ಯಾಸಕ್ಕೂ ಅವರ ಪ್ರತಿಭೆಗೂ ಅಜಗಜಾಂತರ ವ್ಯತ್ಯಾಸ. ಇವರ ಗಮಕ ಕಲೆಯು ರಾಜ್ಯದ ಹಲವು ಖ್ಯಾತನಾಮ ಕವಿ, ಲೇಖಕರ ಪ್ರಶಂಸೆಗೆ ಒಳಗಾಗಿದೆ. ಗಮಕದ ಜೊತೆ ಜೊತೆಗೇ, ಸುಗಮ ಸಂಗೀತ ಹಾಗೂ ರಂಗ ಕ್ಷೇತ್ರದಲ್ಲೂ ಸಾಕಷ್ಟು ಪರಿಣಿತಿಯನ್ನು ಹೊಂದಿರುವ ರಾಯರು, ಅನೇಕ ಕಾರ್ಯಕ್ರಮಗಳನ್ನು ಇಲ್ಲಿಯವರೆಗೆ ನೀಡಿದ್ದಾರೆ. ಕೇವಲ ಕರ್ನಾಟಕದಲ್ಲಿ ಅಲ್ಲದೇ ...
READ MORE