ಮಹಾನ್‌ ಸಾಧಕ ಕೆ.ಸಿ. ರೆಡ್ಡಿ

Author : ಆರ್‌. ವಿ. ರವೀಂದ್ರನಾಥ

Pages 384

₹ 275.00




Year of Publication: 2014
Published by: ಶ್ರೀ ಅನ್ನಪೂರ್ಣೇಶ್ವರಿ ಪ್ರಕಾಶನ
Address: ಕೋಲಾರ-563 101

Synopsys

ಮೈಸೂರು ಸಂಸ್ಥಾನ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಗಿ ಪ್ರತ್ಯೇಕ ರಾಜ್ಯವಾದ ನಂತರ ಅದರ ಪ್ರಥಮ ಮುಖ್ಯಮಂತ್ರಿಯಾಗಿ ಕ್ಯಾಸಂಬಳ್ಳಿ ಚಂಗಲರಾಯರೆಡ್ಡಿಯವರು ಅಧಿಕಾರ ಸ್ವೀಕರಿಸಿಕೊಂಡರು. ಈ ವಿವರ ಬಿಟ್ಟರೆ, ಕೆ.ಸಿ, ರೆಡ್ಡಿಯವರ ಕುರಿತು ಹೆಚ್ಚಿನ ಮಾಹಿತಿಗಳು ಬಹಳಷ್ಟು ಜನರಿಗೆ ತಿಳಿದಿಲ್ಲ. 

ಬಗ್ಗೆ ಉತ್ತಮ ಸಂಶೋಧನಾ ಕೃತಿ ಬಂದಿಲ್ಲ. ಆಧುನಿಕ ಮೈಸೂರು ಚರಿತ್ರೆ ಲೇಖನ ಪರಂಪರೆಯಲ್ಲಿ ಅವರಿಗೆ ಸಿಗಬೇಕಾದ ಸ್ಥಾನ ದೊರಕಿಲ್ಲ. ಈ ಹಿನ್ನಲೆಯಲ್ಲಿ ಶ್ರೀ ಆರ್‌.ವಿ. ರವೀಂದ್ರನಾಥ ಅವರ ಪಿಎಚ್.ಡಿ ಮಹಾಪ್ರಬಂಧವು ಪ್ರಕಟವಾಗಿರುವುದು ಆ ಕೊರತೆಯನ್ನು ನೀಗಿಸುವಂತಿದೆ.

ರೆಡ್ಡಿ ಅವರ ಬಹುಮುಖ ವ್ಯಕ್ತಿತ್ವವನ್ನು ಅರಿಯಲು ಸಹಾಯಕವಾಗುವ ಗ್ರಂಥ ಇದು,.  ಪತ್ರಿಕಾ ವೃತ್ತಿಯ ಮುಖ, ಕೋಲಾರ ಜಿಲ್ಲಾಬೋರ್ಡ್ ಸದಸ್ಯರಾಗಿ, ಅದ್ಯಕ್ಷರಾಗಿ ಅವರ ಕಾರ್ಯವೈಖರಿ, ಬ್ರಾಹ್ಮಣೇತರ ಚಳವಳಿಯ ರಾಜಕೀಯ ಮುಖವಾಣಿ ’ಪ್ರಜಾಪ್ರತಿನಿಧಿ ಸಭೆ’ಯಲ್ಲಿ ಅವರು ನಿರ್ವಹಿಸಿದ ಜವಾಬ್ದಾರಿ, ನಂತರ ರಾಜಕೀಯ ಸ್ಥಿತ್ಯಂತರಗಳಲ್ಲಿ ಸೃಷ್ಠಿಯಾದ ’ಪ್ರಜಾಪಕ್ಷ’ ಮತ್ತು ಅದು ಲೀನವಾಗುವ ’ಪ್ರಜಾಸಂಯುಕ್ತ ಪಕ್ಷ’ ಮುಂತಾದವುಗಳಲ್ಲಿ ಅವರ ಪಾತ್ರ, ಗಾಂಧೀಜಿಯವರ ಹರಿಜನೋದ್ಧಾರ ಚಳವಳಿಯಲ್ಲಿ ತೊಡಗಿಸಿಕೊಳ್ಳುವಿಕೆಯಂತಹ ಮಹತ್ವದ ಸಂಗತಿಗಳನ್ನು ಕೃತಿ ತಿಳಿಸುತ್ತದೆ. 

About the Author

ಆರ್‌. ವಿ. ರವೀಂದ್ರನಾಥ
(27 June 1966)

ಡಾ. ಆರ್.ವಿ. ರವೀಂದ್ರನಾಥ, ಕೋಲಾರನಗರ ಕಠಾರಿಪಾಳ್ಯದ ಎ. ಶಾಂತಮ್ಮ ಹಾಗೂ ಆರ್. ವೆಂಕಟಾಚಲಪತಿಯವರ ಮಗ.  ಇತಿಹಾಸದಲ್ಲಿ MA., M.Phil.,PGDACT. PGDI, PGDEpi., Ph.D.,ಪದವಿ ಪಡೆದಿರುವ ಅವರು ಕರ್ನಾಟಕ, ಬೆಂಗಳೂರು, ಕನ್ನಡ ವಿಶ್ವವಿದ್ಯಾಲಯಗಳಲ್ಲಿ ಪಡೆದು ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಧೀಮಂತ ರಾಜತಂತ್ರಜ್ಞ, ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ  ಕೆ.ಸಿ. ರೆಡ್ಡಿ ಅವರನ್ನು ಕುರಿತ, ಮಹಾನ್ ಸಾಧಕ ಕೆ.ಸಿ. ರೆಡ್ಡಿ ಕೃತಿ ರಚಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ವಿದ್ವತ್ತೂರ್ಣ ಭಾಷಣಗಳನ್ನು ಮಾಡಿದ್ದಾರೆ, ಹಲವಾರು ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸರ್ಕಾರಿ ...

READ MORE

Related Books