ಪಾಕಿಸ್ತಾನಿ ಕವಯತ್ರಿ ಸಾರಾ ಶಗುಫ್ತಾ ಅವರ ಜೀವನ ಮತ್ತು ಕಾವ್ಯವನ್ನು ಕುರಿತು ಪಂಜಾಬಿ ಜ್ಞಾನಪೀಠ ಪುರಸ್ಕೃತ ಲೇಖಕಿ ಅಮೃತಾ ಪ್ರೀತಮ್ ಅವರು ಬರೆದ ಪುಸ್ತಕವನ್ನು ಹಸನ್ ನಯೀಂ ಸುರಕೋಡ ಅವರು ಕನ್ನಡೀಕರಿಸಿದ್ದಾರೆ. ಸಾರಾ ಅವರ ಬರವಣಿಗೆಯನ್ನು ಪರಿಚಯಿಸುವುದರ ಜೊತೆಗೆ ಅದರ ಅನನ್ಯತೆಯನ್ನೂ ಅಮೃತಾ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಈ ಪುಸ್ತಕದ ಒಂದು ಮಾದರಿ ಇಲ್ಲಿದೆ-
ನಿನ್ನ ಪಾಲಿಗೆ ನಿನ್ನ ಗಂಡನೇ ಸರ್ವಸ್ವ ಎಂದು ನನ್ನ ತಂದೆತಾಯಿಯರು ಹೇಳುತ್ತಿದ್ದರು. ಆದರೆ ಅವನು ನನ್ನವನಾಗಿರಲೇ ಇಲ್ಲ. ಅವನು ಎಂಥ ನಾಲಾಯಕ್ ಆಗಿದ್ದನೆಂದರೆ ಸಣ್ಣ ಸಣ್ಣ ವಿಷಯಗಳಿಗೆ ಅವನು ನನಗೆ ಹೊಡೆಯುತ್ತಿದ್ದೆ. ಹೊಡೆತ ಒಮ್ಮೊಮ್ಮೆ ಅದೆಷ್ಟು ಭಯಂಕರವಾಗುತ್ತಿತ್ತೆಂದರೆ ನನ್ನ ಇಡಿ ದೇಹ ಕಪ್ಪಿಟ್ಟು ಹೋಗುತ್ತಿತ್ತು. ತನಗೆ ಬೇಕೆನಿಸಿದಾಗ ನಾನೊಂದು ರಟ್ಟರ್ ಬೊಂಬೆಯೇನೋ ಎನ್ನುವಂತೆ ಅವನು ನನ್ನನ್ನು ಸಂಭೋಗಿಸುತ್ತಿದ್ದ. ಅದೇನೂ ಅನನ್ಯ ವರ್ತನೆಯಾಗಿರಲ್ಲ. ಎಲ್ಲ ಗಂಡಸರು ಹಾಗೇ ಇರುತ್ತಾರೆ. ಹೆಂಡತಿ ನನ್ನಂತೆ ಇರಬೇಕಾಗುತ್ತದೆ. ಹೀಗೆ ದಿನಗಳು ಉರುಳುತ್ತಿದ್ದವು. ಮಾರ್ಕೆಟ್‌ನಿಂದ ತರಕಾರಿ ಖರೀದಿಸಲು ಹೊರಗೆ ಹೋಗಬೇಕಾದರೆ ಬುರ್ಖಾ ತೊಟ್ಟಿರುತ್ತಿದ್ದೆ. ನನ್ನ ಮಕ್ಕಳನ್ನು ನನ್ನ ಜೊತೆಗೆ ಕರೆದೊಯ್ಯುತ್ತಿದ್ದೆ. ನನ್ನ ಪಕ್ಕದಲ್ಲಿ ಇಬ್ಬರು ನಡೆದು ಬರುತ್ತಿದ್ದರು. ಒಂದು ಮಗುವು ಬುರ್ಖಾದಲ್ಲಿ ನನ್ನ ಎದೆಗವಚಿಕೊಂಡಿರುತ್ತಿತ್ತು. ಕರವಸ್ತ್ರ ಇತ್ಯಾದಿಗಳನ್ನು ಒಗೆಯುತ್ತಿದ್ದಾಗ ಬಲು ವಿಚಿತ್ರವೆನ್ನುವಂತೆ ಆ ಕರವಸ್ತ್ರಗಳ ಬಣ್ಣ ತರಕಾರಿಗಳ ಬಣ್ಣವನ್ನೇ ಹೋಲುತ್ತಿತ್ತು. ಒಂದು ಮಗುವಿಗೆ ಎದೆ ಹಾಲೂಡಿಸುತ್ತಿದ್ದುದರಿಂದ “ಇನ್ನು ನೀನು ರೊಟ್ಟಿ ತಿಂದು ಬದುಕೋ" ಎಂದು ಗದರಿದೆ. ನಾಲ್ಕಾಣಿ ಉಳಿತಾಯ ಮಾಡಿ ಆಗ ತರಕಾರಿ ಖರೀದಿಸುತ್ತಿದ್ದೆ. ನಾನು ಇನ್ನಷ್ಟು ಉಳಿತಾಯ ಮಾಡುವುದು ಸಾಧ್ಯವಾದಾಗ ಒಂಬತ್ತನೆಯ ಕ್ಲಾಯಾಸಿನ ಪುಸ್ತಕ ಖರೀದಿಸಿ ತಂದು ನನ್ನ ಮ್ಯಾಟ್ರಿಕ್ಯೂಲೇಶನ್‌ಗಾಗಿ ಓದಲಾರಂಭಿಸಿದೆ. ನನ್ನ ಗಂಡ ಮತ್ತೊಬ್ಬ ಹೆಣ್ಣಿನ ಜೊತೆ ಚಕ್ಕಂದವಾಡುತ್ತಿದ್ದಾನೆ ಎಂದು ನನಗೆ ಸುಳಿವು ಸಿಕ್ಕಿತು, ಯಾರನ್ನೂ ಬಂಧಿಯಾಗಿ ಇಡುವುದು ಸಾಧ್ಯವಿಲ್ಲ. ಹಾಗಾಗಿ ನಾನು ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳಲಿಲ್ಲವಾದರೂ ಮನಸ್ಸಿಗೆ ತುಂಬ ನೋವಾಯಿತು.
©2024 Book Brahma Private Limited.