ಪ್ರಸಿದ್ದ ಗಾಯಕಿ ಗಂಗೂಬಾಯಿ ಹಾನಗಲ್ಲ ಅವರ ಜೀವನ ಚರಿತ್ರೆಯನ್ನು , ಸಂಗೀತ ಜಗತ್ತಿನಲ್ಲಿ ಅವರದೇ ಆದ ಅವರ ಬದುಕಿನ ಆಗು-ಹೋಗುಗಳ, ವ್ಯಕ್ತಿತ್ವಗಳ ಬಗ್ಗೆ ಪರಿಚಯಿಸುವ ಪುಸ್ತಕ ’ಗಂಗಾವತರಣ ’. ಗಂಗೂಬಾಯಿ ಹಾನಗಲ್ಲ ಅವರು ಸಂಗೀತ ಕ್ಷೇತ್ರಕ್ಕಷ್ಟೇ ಅಲ್ಲದೇ ಕರ್ನಾಟಕದ ಸಾಮಾಜಿಕ ರಾಜಕೀಯ ಜೀವನಗಳಿಗೂ ಸ್ಪಂದಿಸುತ್ತಿದ್ದ ಅವರ ವ್ಯಕ್ತಿತ್ವವನ್ನೂ ಸಹ ಈ ಪುಸ್ತಕ ತಿಳಿಸುತ್ತದೆ. ಇಂತಹ ವರ್ಣರಂಜಿತ ವ್ಯಕ್ತಿತ್ವದ, ಜೀವನದ ಗಂಗೂಬಾಯಿ ಹಾನಗಲ್ಲ ಅವರ ಸಂಪೂರ್ಣ ಚಿತ್ರವನ್ನು ಈ ಕೃತಿ ನೀಡುತ್ತದೆ. ಈ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಕಾದಂಬರಿಗಾರ್ತಿ, ಅನುವಾದಕಿ ದಮಯಂತಿ ನರೇಗಲ್ಲ ಅವರು ಇಂಗ್ಲಿಷ್ ಪ್ರಾಚಾರ್ಯರಾಗಿದ್ದು 1937 ಮೇ 12 ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆ ಯಲ್ಲಿ ಜನಿಸಿದರು. “ತೇರನೆಳೆಯ ಬಾರಾ ತಂಗಿ, ತ್ರಿವೇಣಿ, ಯಯಾತಿ ಪ್ರಸಂಗ” ಅವರು ಪ್ರಮುಖ ಕಾದಂಬರಿಗಳು. ತೇರನೆಳೆಯ ಬಾರತಂಗಿ ಕೃತಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಸಾಹಿತ್ಯ ಪರಿಷತ್ತಿನ ಬಹುಮಾನ, ಬೀದಿ ನಾಟಕ ಸ್ಪರ್ಧೆಯಲ್ಲಿ 2ನೇ ಬಹುಮಾನ ಸಂದಿದೆ. ಮಃಆರಾಷ್ಟ್ರದಲಲ್‌ಇ ಸಂಗೀತ ವಿಮರ್ಶಕರೆಂದೇ ಪ್ರಸಿದ್ಧವಾಗಿರುವ ಅರವಿಂದ ಗಜೇಂದ್ರಗಡಕರ ’ಅಸೇ ಸೂರ,.. ಅಶೀ ಮಾಣಸ’ ಎಂಬ ಪುಸ್ತಕವನ್ನು ಕನ್ನಡಕ್ಕೆ ತಂದಿದ್ಧಾರೆ ದಮಯಂತಿ ನರೇಗಲ್ಲ ಅವರು. ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2010