`ವೀರಸರ್ವಾಕರ್’ ಚಕ್ರವರ್ತಿ ಸೂಲಿಬೆಲೆ ಅವರ ಕೃತಿಯಾಗಿದೆ. ಸರ್ವವನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದುಕೊಂಡ, ಸಾವಿರಾರು ಯುವಕರಿಗೆ ಪ್ರೇರೇಪಣೆ ನೀಡಿ ಕ್ರಾಂತಿಕಾರಿಗಳನ್ನಾಗಿಸಿದ ವೀರ ಸಾವರ್ಕರ್ ಅವರನ್ನು ರಾಷ್ಟ್ರವಿರೋಧಿಗಳು ಇಂದಿಗೂ ಅಪಹಾಸ್ಯ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಸಾವರ್ಕರ್ ಅವರ ಹೋರಾಟ, ಅನುಭವಿಸಿದ ನೋವು, ಎದುರಿಸಿದ ಅವಮಾನ ಎನ್ನವನ್ನೂ ಈ ಪುಟ್ಟ ಕೃತಿಯು ತೆರೆದಿಡುತ್ತದೆ.
ಚಕ್ರವರ್ತಿ ಸೂಲಿಬೆಲಿ ಎಂದೇ ಗುರುತಿಸಿಕೊಳ್ಳುವ ಮಿಥುನ್ ಚಕ್ರವರ್ತಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. 1980ರ ಏಪ್ರಿಲ್ 9 ರಂದು ಜನನ. ಓದಿದ್ದು, ಬೆಳೆದಿದ್ದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ. ತಂದೆ ದೇವದಾಸ್ ಸುಬ್ರಾಯ್ ಶೇಟ್, ಸೂಲಿಬೆಲಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿದ್ದಾರೆ. ಬೆಂಗಳೂರು ಜೈನ್ ಕಾಲೇಜಿನಲ್ಲಿ ಪಿಯುಸಿ ನಂತರ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು. ವಾಗ್ಮಿ, ಅಂಕಣಕಾರ. ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕ ಸೂಲಿಬೆಲಿ ಅವರು ‘ಮೇರಾ ಭಾರತ್ ಮಹಾನ್’, ‘ಪೆಪ್ಸಿ ಕೋಕ್ ಅಂತರಾಳ’, ‘ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ...
READ MORE