.
ಭೂಗತರಾಗಿದ್ದಾಗ ಕಮುನಿಸ್ಟ್ ಪಕ್ಷದತ್ತ ಆಕರ್ಷಿತರಾದ ಜೈಪಾಲ್ ಸಿಂಗ್ ಮುಂದೆ ಸಿಪಿಐ(ಎಂ)ನ ದಿಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು; ೧೯೭೮ರಲ್ಲಿ ಜಾಲಂಧರ್‌ನಲ್ಲಿ ನಡೆದ ಸಿಪಿಐ(ಎಂ)ನ ೧೦ನೆ ಮಹಾಧಿವೇಶನದಲ್ಲಿ ಆ ಪಕ್ಷದ ಕೇಂದ್ರ ಸಮಿತಿಗೆ ಆರಿಸಲ್ಪಟ್ಟರು. ಅವರ ಈ ರೋಮಾಂಚಕ ಬದುಕಿನ ಕೆಲವು ನೆನಪುಗಳು ೧೯೯೦ರಲ್ಲಿ ಇಂಗ್ಲೀಷಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾದವು. ಮುಖ್ಯವಾಗಿ ಬ್ರಿಟಿಶ್ ಭಾರತೀಯ ಸೇನೆಯಲ್ಲಿ, ನಂತರ ತೆಲಂಗಾಣದ ರೈತ ಹೋರಾಟಗಾರರ ಜೊತೆಗೆ ಅವರ ಅನುಭವಗಳ ನೆನಪುಗಳಿರುವ ಈ ಕೃತಿ ಆ ಪ್ರಕ್ಷುಬ್ಧ ಕಾಲಘಟ್ಟಗಳ ಉಜ್ವಲ ವರ್ಣನೆ ನೀಡಿದೆ. ದುರದೃಷ್ಟವಶಾತ್ ಈ ಕಥನ ಪೂರ್ಣಗೊಳ್ಳಲಿಲ್ಲ, ಅವರ ತೆಲಂಗಾಣ ಅನುಭವದ ಮಧ್ಯದಲ್ಲೇ ನಿಂತು ಹೋಗುತ್ತದೆ. ಆದರೂ ಇದು ಈಗಿನ ಯುವ ಪೀಳಿಗೆಗೆ ಅತ್ಯಂತ ಸ್ಫೂರ್ತಿದಾಯಕ.
ಕೆಲವು ವರ್ಷಗಳ ಹಿಂದೆ ಅವರ ಈ ನೆನಪುಗಳು ಕನ್ನಡದಲ್ಲಿ ಐಕ್ಯರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದವು. ಅವನ್ನು ಈಗ ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸಲಾಗಿದೆ. ಇದನ್ನು ಅನುವಾದಿಸಿ ಕೊಟ್ಟ ಪತ್ರಕರ್ತರಾದ ವಿಶ್ವ ಕುಂದಾಪುರ ಅವರು ಸಂಗ್ರಹಿಸಿದ್ದಾರೆ. ಜಿ.ವಿ. ಶ್ರೀರಾಮ ರೆಡ್ಡಿ, ಸಿಪಿಐ(ಎಂ)ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರು, ಒಂದು ಪರಿಚಯಾತ್ಮಕ ಮುನ್ನುಡಿಯನ್ನು ನೀಡಿದ್ದಾರೆ.
ವಿಶ್ವ ಕುಂದಾಪುರ ಅವರು ವಿದ್ಯಾರ್ಥಿ ದಿನಗಳಿಂದಲೂ ಪ್ರಗತಿಪರ ಆಂದೋಲನದಲ್ಲಿ ಗುರುತಿಸಿಕೊಂಡವರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು 'ದಿ ಹಿಂದೂ’ ಇಂಗ್ಲಿಷ್ ದೈನಿಕದ ಪ್ರಧಾನ ವರದಿಗಾರರಾಗಿ ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ’ಸಮತೆಯ ನಾಡಿನ ಉದಯಕ್ಕಾಗಿ’ (ಹರಿಕಿಷನ್ ಸಿಂಗ್ ಸುರ್ಜಿತ್), ವಿಮೋಚನೆಯ ಸಮರದಲ್ಲಿ (ಮೇಜರ್ ಜೈಪಾಲ್ ಸಿಂಗ್), ’ಮಾವೋವಾದ: ಒಂದು ಎಡಪಂಥೀಯ ವಿಶ್ಲೇಷಣೆ' (ವಿವಿಧ ಲೇಖಕರು), `ಚಿತ್ತಗಾಂಗ್ ಶಸ್ತ್ರಾಗಾರ ದಾಳಿ' (ಸುಜೂದ್ ರಾಮ್ ) ಅವರ ಕೆಲವು ಪ್ರಮುಖ ಅನುವಾದ ಕೃತಿಗಳು. ಅವರ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ’ ಪ್ರಬಂಧವು ಕನ್ನಡದಲ್ಲಿ ಅಪರೂಪದ ಕೃತಿ. `ವಿಮೋಚನೆಯ ಸಮರ’ದಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2009ನೇ ಸಾಲಿನ ಅತ್ಯುತ್ತಮ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2009