ಭಾರತೀಯ ಆಡಳಿತ ಸೇವೆಗಳ ಹಿರಿಯ ಅಧಿಕಾರಿಗಳಾದ ಕೆ. ಜೈರಾಜ್ ಅವರ ವ್ಯಕ್ತಿತ್ವವನ್ನು , ಮತ್ತು ಅವರ ಆಡಳಿತ ಕ್ರಮವನ್ನು ,ಅವರು ತಮ್ಮ ಲೇಖನಗಳಲ್ಲಿ ಸಾಮಾಜಿಕ ಕಾಳಜಿಯನ್ನು ಅನಾವರಣಗೊಳಿಸುವ ಹಾಗೂ ಆಸಕ್ತಿಕರವಾದ ವಿಷಯಗಳನ್ನು ಪ್ರಸ್ತಾಪಿಸಿರುವ ಅಪರೂಪದ ಸಂಗತಿಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಈ ಕೃತಿ ಪ್ರಮುಖವಾಗುತ್ತದೆ.
ಕೆ. ಜೈರಜ್ ಅವರ ಜಿವನಮೌಲ್ಯಗಳ ತಾತ್ವಿಕ ಸಿದ್ದಾಂತಗಳನ್ನು ಮತ್ತು ಸಾಮಾಜಿಕ ಸಂಗತಿಗಳನ್ನು ಮನದಟ್ಟಾಗುವಂತೆ ನಿರೂಪಿಸಿ ಓದುಗರಿಗೆ ನೀಡಿರುವ ಲೇಖಕ ಅ. ನಾ ಪ್ರಹ್ಲಾದರಾವ್ ಅವರ ಈ ಪ್ರಯತ್ನ ಹಲವಾರು ವಿಷಯ, ಚರ್ಚೆಗಳ, ದಾಖಲೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.
ಆಡಳಿತ ಅನುಭವಗಳನ್ನು ದಾಖಲಿಸಿರುವ ಈ ಕೃತಿಯು 2007-2017 ರ ನಡುವಿನ ವಿದ್ಯಮಾನಗಳ ಕುರಿತಾದ ಲೇಖನಗಳ ಸಂಗ್ರಹ ಈ ಕೃತಿಯಲ್ಲಿದೆ.
ನೂತನ ಸೂತ್ರ, ಸಾರ್ವಜನಿಕ ಹಿತ ಮುಖ್ಯ, ಕೂಡಗಿ ಸ್ಥಾವರ ದಕ್ಕಿತು, ವಿದ್ಯುತ್ ಉತ್ಪಾದಕರ ಮೇಲೆ ನಿರ್ಬಂಧ, ಆಡಳಿತವರ್ಗ ಮತ್ತು ರಾಜಕೀಯ ಶಕ್ತಿ, ಗ್ರಾಮೀಣ ಭಾರತದ ಕಲ್ಪನೆ, ಶ್ರೀವ್ಯಾಸರಾಜ ಮಠದಿಂದ ಎರಡನೆ ಇನ್ನಿಂಗ್ಸ್ ಆರಂಭ, ತಿರುಮಲೆ ಆಸ್ತಿಗೆ ಮುಕ್ತಿ, ತಮಿಳುನಾಡು ಆಸ್ತಿ ಸಂರಕ್ಷಣೆ, ಗುಜರಾತ್ ವಿದ್ಯುತ್ ವಿಸ್ಮಯ, ಸಚಿವಾಲಯದಲ್ಲಿ ವಿಶಿಷ್ಟ ಸೆಲ್, ಅನಿಲ ಕೊಳವೆ ಮಾರ್ಗದ ಕನಸು ಇನ್ನೂ ಮುಂತಾದ 60 ಲೇಖನಗಳನ್ನು ಹೊಂದಿದೆ.
©2024 Book Brahma Private Limited.