ಹಿಂದುಳಿದ ಲಂಬಾಣಿ ಜನಾಂಗದಲ್ಲಿ ಹುಟ್ಟಿದ ಲೇಖಕಿ ಲಲಿತಾ ನಾಯಕ್ ಅವರು ಉನ್ನತ ಶಿಕ್ಷಣ ಪಡೆಯದೆ ತಮ್ಮ ಜೀವನದ ಅನುಭವಗಳನ್ನೇ ಶಿಕ್ಷಣವನ್ನಾಗಿ ರೂಪಿಸಿಕೊಂಡವರು. ಪತ್ರಕರ್ತೆ, ಲೇಖಕಿ, ರಾಜಕಾರಣಿ ಹೀಗೆ ಅವರದು ಬಹುಮುಖ ಹೋರಾಟ. ಸ್ತ್ರೀಪರ ಧ್ವನಿ ಅವರ ಬರವಣಿಗೆಯ ಪ್ರಮುಖ ಸತ್ವ.
ಲಲಿತಾ ನಾಯಕ್ ಅವರ ಬದುಕನ್ನು ಕುರಿತು ಲೇಖಕ ಡಾ. ಎಂ. ರವಿನಾಯ್ಕ ಪ್ರಸ್ತುತ ಕೃತಿಯನ್ನು ಪ್ರಕಟಿಸಿದ್ದಾರೆ. ಉದಯಭಾನು ಕಲಾಸಂಘ ಕೃತಿಯನ್ನು ಪ್ರಕಟಿಸಿದೆ.
ಡಾ. ಎಂ. ರವಿನಾಯ್ಕ ಇವರು ಕುವೆಂಪು ವಿಶ್ವವಿದ್ಯಾ ನಿಲಯದಿಂದ ಎಂ.ಎ., ಎಂ.ಇಡಿ., ಪಿಎಚ್.ಡಿ. ಪದವಿಗಳನ್ನು ಪಡೆದವರು. ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ದೂರಶಿಕ್ಷಣ ನಿರ್ದೇಶನಾಲಯದಲ್ಲಿ ಸಂಶೋಧನಾ ಹಾಗೂ ಬೋಧನಾ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. “ಬುಡಕಟ್ಟು ಹಕ್ಕಿಯ ಹಾಡು' (ಬಿ.ಟಿ. ಲಲಿತಾ ನಾಯಕ್ : ಜೀವನ ಮತ್ತು ಸಾಹಿತ್ಯ) - 2010, 'ಬಿ.ಟಿ. ಲಲಿತಾ ನಾಯಕ್ ಅವರ ಕಾವ್ಯದ ವೈಶಿಷ್ಟ್ಯಗಳು' –2011 ರಲ್ಲಿ ಪ್ರಕಟಗೊಂಡ ಕೃತಿಗಳು. ಇವರು ಕರ್ನಾಟಕ ಸಂಘ (ಶಿವಮೊಗ್ಗ) ದ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪುರಸ್ಕಾರ (1999-2000) ಹಾಗೂ ಶ್ರೀ ಸೇವಾಲಾಲ್ ಪ್ರಶಸ್ತಿ (2011 ) ಪುರಸ್ಕೃತರು. ...
READ MORE