'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ ಕುಸುಮ: 254 ಶಾಸ್ತ್ರ ಸಾಹಿತ್ಯ ವಿಹಾರಿ ಡಾ. ಪಿ. ಶ್ರೀಕೃಷ್ಣ ಭಟ್ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸಿದ ಗುರುಪರಂಪರೆಯಲ್ಲಿ ಡಾ. ಪಿ. ಶ್ರೀಕೃಷ್ಣ ಭಟ್ ಅವರದು ಒಂದು ಮುಖ್ಯ ಹೆಸರು. ಅವರು ೧೯೬೯ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗಕ್ಕೆ ಮೂರನೆಯ ಉಪನ್ಯಾಸಕ ನಾಗಿ ಸೇರ್ಪಡೆಗೊಂಡರು. ಅವರು ಪ್ರೊಫೆಸರ್ ಆಗಿ ಭಡ್ತಿ ಪಡೆದು ವಿಭಾಗ ಮುಖ್ಯಸ್ಥನಾದರು. ಸಂಶೋಧನ ಮಾರ್ಗದರ್ಶಕರಾಗಿ ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ನಿವೃತ್ತಿಯ ನಂತರ, ೧೯೯೮ರಿಂದ ಹತ್ತು ವರ್ಷಗಳ ಕಾಲ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದ ಮೊದಲ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ.
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ರಾಧಾಕೃಷ್ಣ ಬೆಳ್ಳೂರು ಅವರು 'ತುಳು ಛಂದಸಿನ ವಿಮರ್ಶಾತ್ಮಕ ಅಧ್ಯಯನ' ಅವರ ಪಿಎಚ್.ಡಿ. ಸಂಪ್ರಬಂಧ. ಕಣ್ಣೂರು ವಿಶ್ವವಿದ್ಯಾಲಯದ ಸಂಶೋಧನ ಮಾರ್ಗದರ್ಶಕರೂ ಕನ್ನಡ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿಯ ಅಧ್ಯಕ್ಷರೂ ಆಗಿರುವ ಡಾ. ಬೆಳ್ಳೂರು, ಮುಂಡೂರು, ಮುಗಿಲ ನೆರಳಿನ ಬದುಕು, ಅಜಿಹ್ವಾ, ಭಾಷಣ ಕಲೆ, ಕರಾಡ ಉಪಭಾಷೆ, ತುಳು ಛಂದಸ್ಸು, ಶಬ್ದ ಸೂತಕ, ತುಳು ಲಿಪಿ ಪರಿಚಯ ಮುಂತಾಗಿ ಇಪ್ಪತ್ತರಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರು ಪ್ರಾಚೀನ ತುಳು ಶಾಸನಗಳು ಮತ್ತು ತಾಳೆಯೋಲೆಗಳ ಬಗ್ಗೆ ...
READ MORE