ಇಪ್ಪತ್ತನೆಯ ಶತಮಾನದ ಪ್ರಮುಖ ಭಾರತೀಯ ನವಮಾನವತಾವಾದಿ, ಸಾಮಾಜಿಕ ಮತ್ತು ರಾಜಕೀಯ ಚಿಂತಕ ಎಂ.ಎನ್. ರಾಯ್. ಇವರ ಬದುಕು ಬರಹ, ಸಾಧನೆಗಳ ಕುರಿತು ಕೃತಿಯು ಸವಿಸ್ತಾರವಾಗಿ ವಿವರಿಸಿದೆ. ಇವರು ಪ್ರತಿಪಾದಿಸಿದ ಮೂಲ ಮಾನವತಾವಾದ ಅಥವಾ ರ್ಯಾಡಿಕಲ್ ಹ್ಯೂಮನಿಸಂ ಮಾನವ ಸಮಾಜದ ಆರ್ಷಮಾದರಿ ಎಂದು ಪರಿಗಣಿಸಲಾಗಿದೆ. ಸಹಕಾರತತ್ತ್ವ ವೈಯಕ್ತಿಕ ಸಾಮಥ್ರ್ಯವನ್ನು ಬೆಳಕಿಗೆ ತರಲು ಸಹಕರಿಸುತ್ತವೆ; ವೈಯಕ್ತಿಕ ಸಾಧನೆ ಸಿದ್ದಿಗಳೇ ಸಾಮಾಜಿಕ ಬೆಳವಣಿಗೆಯ ಮಾನದಂಡಗಳು. ಇಂಥ ಬೆಳವಣಿಗೆ ಮಾನವನ ಮೂಲಭೂತ ಸ್ವಭಾವಗಳಾದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಮತ್ತು ಸತ್ಯವನ್ನು ಹುಡುಕುವುದು ಈ ಕ್ರಿಯೆಗಳಲ್ಲಿ ಫಲವಾಗುತ್ತದೆ. ಆದ್ದರಿಂದ ಹೊಸ ಸ್ವತಂತ್ರ ಜಗತ್ತಿನ ನಿರ್ಮಾಣಕ್ಕಾಗಿ ಸಮಾಜದ ಆರ್ಥಿಕ ಸಂಘಟನೆಯ ಹಿಡಿತವನ್ನು ದಾಟಿ ಕ್ರಾಂತಿ ಮುಂದೆ ಹೋಗಬೇಕೆಂದು ಇವರು ಪ್ರತಿಪಾದಿಸಿದರು ಮುಂತಾದ ಹಲವಾರು ವಿಷಯಗಳು ಈ ಕೃತಿಯಲ್ಲಿವೆ.
©2024 Book Brahma Private Limited.