ರೇಖಾ ವಿ.ಬನ್ನಾಡಿ ಅವರ ‘ಖಾದಿಯಲ್ಲಿ ಅರಳಿದ ಸಂತ ಸಂಜೀವನಾಥ ಐಕಳ’ ಕೃತಿಯು ಸಮಾಜಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಸಿಕೊಂಡಿದ್ದ ಮಹಾನ್ ವ್ಯಕ್ತಿತ್ವದ ಸಂಜೀವನಾಥ ಐಕಳ ಅವರ ಜೀವನ ಚಿತ್ರಣವಾಗಿದೆ. ಈ ಕೃತಿಗೆ ಪ್ರೊ.ಪಾ ಶ್ರೀಪತಿ ತಂತ್ರಿ ಅವರು ಮುನ್ನುಡಿ ಬರೆದಿದ್ದಾರೆ. ‘ಈ ಕಿರುಹೊತ್ತಿಗೆಯಲ್ಲಿ ರೇಖಾ ಬನ್ನಾಡಿವರು ನೇರವಾದರೂ ದೀರ್ಘವಾಗಿ ಪರಿಚಯಿಸಿದಂತೆ, ಐತಾಳರಲ್ಲಿ ನಾವೆಲ್ಲರೂ ಗುರುತಿಸಬೇಕಾದ ಅಂಶ, - ಅವರು ಸಾಮಾನ್ಯರಂತೆ ಕೇವಲ ಒಬ್ಬ ಒಳ್ಳೆಯ ವ್ಯಕ್ತಿಯೆಂದಲ್ಲ. ಒಳ್ಳೆಯ ಗಂಡನಾಗಿ, ಮಕ್ಕಳಿಗೆ ತಂದೆಯಾಗಿ ಕೌಟುಂಬಿಕ ಯಜಮಾನನಾಗಿಬದುಕಿದರೆಂಬುದಕ್ಕಾಗಿ ಅಲ್ಲ. ಅವರ ಪೂರ್ತಿ ಜೀವನ ಸಮಾಜಕ್ಕಾಗಿ ಎತ್ತಿದ ಅವತಾರವೆಂದೇ ನನಗೆ ಕಾಣುತ್ತದೆ. ಅವರ ಬದುಕಿನ ಪ್ರತಿಯೊಂದು ಕ್ಷಣವೂ ದೇಶದ ನೆನಪಿನಲ್ಲಿ ಸಮಾಜದ ಒಳಿತಿಗಾಗಿ ತುಡಿಯುತ್ತಿದ್ದುದನ್ನು ನಾನು ಹತ್ತಿರದಿಂದ ನೋಡಿ ಬಲ್ಲೆ. ಬದುಕಿನಾದ್ಯಂತ ಮಾನವೀಯ ಮೌಲ್ಯಗಳನ್ನು, ಆದರ್ಶಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಾಲಗತಿಯಲ್ಲಿ ಸಾಗುತ್ತಿರುವಾಗ ದಾರಿಯೆಲ್ಲ ಬೆಂಕಿಮಯವಾಗಿದ್ದರೂ ದಾರಿಬದಲಿಸದೆ ಒಂಭತ್ತು ದಶಕಗಳ ಸುದೀರ್ಘ ಪಯಣವನ್ನು ನಗು ಮುಖದಲ್ಲೇ ಪೂರ್ತಿಗೊಳಿಸಿದ ಪರಿಶುದ್ಧ ಮಾನವನ ಕತೆ- ಎಲ್ಲರೂ ಓದಲೇ ಬೇಕಾದ್ದು.ಓದುವಾಗ, ಹರಿಶ್ಚಂದ್ರನ ಪತ್ನಿಯಂತೆ ಹಿಂಬಾಲಿಸಿ ಸಾಗಿದ ಅವರ ಮಡದಿಯನ್ನು ಮರೆತ್ಲಿ, ಓದು ಅಪೂರ್ಣವಾದೀತು’ ಎಂಬುದಾಗಿ ಮುನ್ನುಡಿಯಲ್ಲಿ ಪ್ರೊ.ಪಾ ಶ್ರೀಪತಿ ತಂತ್ರಿ ಬರೆದಿದ್ದಾರೆ.
ಲೇಖಕಿ ರೇಖಾ ವಿ.ಬನ್ನಾಡಿ ಅವರು ಮೂಲತಃ ಕುಂದಾಪುರ ತಾಲೂಕಿನ ಗುಲ್ವಾಡಿಯವರು. ಬಸ್ರೂರು ಶ್ರೀ ಶಾರಾದಾ ಕಾಲೇಜಿನಲ್ಲಿ ಪದವಿ ಪಡೆದ ಅವರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಹಾಗೂ ಪಿಎಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಪ್ರಸ್ತುತ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಸಾಹಿತ್ಯ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲೀಲಾ ಕಾರಂತ, ವಿಜ್ಞಾನ ಸಾಹಿತ್ಯ(ಸಂ), ಕಾರಂತ ದುಡಿಮೆ ಪ್ರಪಂಚ ಕೃತಿಗಳನ್ನು ಪ್ರಕಟಿಸಿದ್ದಾರೆ. ’ಕಾರಂತ ದುಡಿಮೆ ಪ್ರಪಂಚ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಲ್ಲಿಕಾ ದತ್ತಿ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಪ್ರಸ್ತುತ ರೇಖಾ ವಿ. ಬನ್ನಾಡಿ ಅವರು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ...
READ MORE