ಪದ್ಯಾಣ ಗೋಪಾಲಕೃಷ್ಣ

Author : ಸೇರಾಜೆ ಸೀತಾರಾಮ ಭಟ್ಟ

Pages 52

₹ 45.00




Year of Publication: 2016
Published by: ಕನ್ನಡ ಸಂಘ ಕಾಂತಾವರ(ರಿ)
Address: ಕಾಂತಾವರ, ಕಾರ್ಕಳ, ಉಡುಪಿ ಜಿಲ್ಲೆ- 574129

Synopsys

‘ಪದ್ಯಾಣ ಗೋಪಾಲಕೃಷ್ಣ’ ಸೇರಾಜೆ ಸೀತಾರಾಮ ಭಟ್ಟ ಅವರ ಕೃತಿ. ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಗೆ ಡಾ. ನಾ. ಮೊಗಸಾಲೆ ಅವರು ಕೃತಿಗೆ ಅಧ್ಯಕ್ಷೀಯ ಮಾತುಗಳನ್ನು ಬರೆದಿದ್ದಾರೆ. ಇದು ಸ್ವಾಭಿಮಾನದ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ಬದುಕು ಬರಹಗಳ ಮೇಲೆ ಬೆಳಕು ಚೆಲ್ಲುತ್ತದೆ.

About the Author

ಸೇರಾಜೆ ಸೀತಾರಾಮ ಭಟ್ಟ

ಸೇರಾಜೆ ಸೀತಾರಾಮ ಭಟ್ಟರು ಯಕ್ಷಗಾನ ಕವಿ, ಯಕ್ಷಗಾನ ಕಲಾವಿದ, ಸಂಘಟಕ ಮತ್ತು ಪುರಾಣ ಪ್ರವಚನ ವ್ಯಾಖ್ಯಾನಕಾರರಾಗಿ ಪ್ರಸಿದ್ಧರು. ಖ್ಯಾತ ಯಕ್ಷಗಾನ ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳ ಸೋದರಳಿಯ. ಉಡುಪಿಯಲ್ಲಿ ಬಿ.ಎಸ್ಸಿ ಮತ್ತು ಎಲ್.ಎಲ್.ಬಿ. ಪದವಿಗಳನ್ನು ಪಡೆದು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಸೇರಾಜೆಯವರು ಬೆಂಗಳೂರಿನಲ್ಲಿ ಕರಾವಳಿ ಯಕ್ಷಗಾನ ಸಂಘವನ್ನು ಸ್ಥಾಪಿಸಿದ್ದಲ್ಲದೆ ಮೊದಲ ಬಾರಿಗೆ ಅಲ್ಲಿ ತಾಳಮದ್ದಳೆ ಸಪ್ತಾಹವನ್ನು ಆಯೋಜಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 55 ವರ್ಷಗಳ ಅನುಭವವನ್ನು ಹೊಂದಿರುವ ಸೇರಾಜೆಯವರು ಅರ್ಥಧಾರಿಯೂ, ಹವ್ಯಾಸಿ ವೇಷಧಾರಿಯಾಗಿಯೂ ಜನಮನ್ನಣೆ ಗಳಿಸಿದ್ದಾರೆ. ಯಕ್ಷಗಾನ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ, ಅವಲೋಕನಕಾರರಾಗಿ ನಿರತರು. ಸೇರಾಜೆಯವರು ರಚಿಸಿದ ಐದು ...

READ MORE

Related Books