‘ನಾಗಾರ್ಜುನನ ಜೀವನ ಚರಿತ್ರೆ ಮತ್ತು ತತ್ವದರ್ಶನ’ ಉದಯ್ ಕುಮಾರ್ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ನಾಗಾರ್ಜುನನು ಕ್ರಿ.ಪೂ.150-250ರಲ್ಲಿ ಐತಿಹಾಸಿಕ ಬುದ್ಧರ ನಂತರ ಆಗಿ ಹೋದ ಅತ್ಯಂತ ಮಹತ್ವದ ಬೌದ್ಧ ತತ್ವಶಾಸ್ತ್ರಜ್ಞನೆಂದು ಖ್ಯಾತನಾಗಿದ್ದಾನೆ. ಭಾರತೀಯ ತತ್ವಶಾಸ್ತ್ರದ ಇತಿಹಾಸದಲ್ಲಿ ಅತ್ಯಂತ ಮೂಲ ಮತ್ತು ಪ್ರಭಾವಿ ಚಿಂತಕನಾಗಿದ್ದ ಅವನ 'ಮಧ್ಯಮಕ' ಮಧ್ಯಮ ಮಾರ್ಗ ಕಲ್ಪನೆಯಾದ 'ಶೂನ್ಯತೆ'ಯ ತತ್ವಶಾಸ್ತ್ರವು ಕೇಂದ್ರ ಮೇಲೆ ಆಧಾರಿತವಾಗಿದೆ. ಶೂನ್ಯತೆಯ ಕಲ್ಪನೆಯು ಭಾರತೀಯ ತತ್ವಶಾಸ್ತ್ರದ ಚರ್ಚೆಯ ಮೇಲೆ ಅವನು ಸತ್ತ ಸಹಸ್ರವರ್ಷಗಳವರೆಗೆ ಪ್ರಭಾವಬೀರುತ್ತ ಇಂದಿಗೂ ಪಾಶ್ಚಾತ್ಯ ತತ್ವಶಾಸ್ತ್ರಜ್ಞರ ಚರ್ಚೆಯ ವಸ್ತು ವಿಷಯವಾಗಿದೆ. ನಾಗಾರ್ಜುನನ ವಿಚಾರದ ಒಂದು ನಿರ್ದಿಷ್ಟ ಓದನ್ನು 'ಪ್ರಾಸಂಗಿಕ' ಎಂದು ಕರೆಯಲಾಗುತ್ತದೆ, ಅದು ಟಿಬೇಟ್ಟಿನ ಬೌದ್ಧಧರ್ಮದ ಅಧಿಕೃತ ನಿಲುವಾಯಿತು. ಮತ್ತು ಈ ಶೂನ್ಯತೆಯ ತತ್ವಶಾಸ್ತ್ರವು ಜಪಾನ್, ಚೀನಾ ಮತ್ತು ಇತರ ಏಶಿಯಾ ರಾಷ್ಟ್ರಗಳ ಮುಖ್ಯ ಬೌದ್ಧ ತತ್ವವಾಗಿ ಮನ್ನಣೆ ಪಡೆಯಿತು. ಎಲ್ಲ ವಸ್ತುಗಳೂ ಸ್ವಭಾವ ಶೂನ್ಯವಾಗಿವೆ. ಅವುಗಳಿಗೆ ಅವುಗಳದೆ ಸ್ವಭಾವವೆಂಬುದಿಲ್ಲ. ಎಲ್ಲ ಭಾರತೀಯ ಷಡ್ಡರ್ಶನಗಳಾದ ಸಾಂಖ್ಯ, ನ್ಯಾಯ, ವೈಷೇಶಿಕ, ಪೂರ್ವಮೀಮಾಂಸೆ, ಉತ್ತರ ಮೀಮಾಂಸೆ ಅಂದರೆ ವೇದಾಂತ ಇವೆಲ್ಲವೂ ಸ್ವಭಾವವುಳ್ಳ ಶಾಶ್ವತ ಆತ್ಮ ಮತ್ತು ಬ್ರಹ್ಮನ್ ಕಲ್ಪನೆಯನ್ನು ನೆಚ್ಚಿಕೊಂಡು ಜನರನ್ನು ಮೌಡ್ಯದಲ್ಲಿ ಬಹುಕಾಲ ನಿಲ್ಲಿಸಿ ಭಾರತದ ಸಂಸ್ಕೃತಿ ಒಂದು ವರ್ಗಕ್ಕೆ ಉಪಯುಕ್ತವಾದ ನಂಬಿಕೆಗಳನ್ನಾಗಿ ಬೆಳೆಸಿಬಿಟ್ಟಿದೆ. ದೇಹಿನ್ ಆದ ಅತ್ಯದ ಕಲ್ಪನೆಯನ್ನು ಸೃಷ್ಟಿಸಿ ಅದರ ನಿರ್ಮಾತ್ಮ ಪರಮಾತ್ಮ ಎಂಬ ಕಲ್ಪನೆಯನ್ನು ಸೃಷ್ಟಿಸಿ ಆ ಕಲ್ಪನೆಯ ಆಧಾರದ ಮೇಲೆ ನಾಲ್ಕು ವರ್ಣಗಳನ್ನು ರಚಿಸಲಾಯಿತು. ಇದು ನಮ್ಮ ದೃಷ್ಟಿಕೋನವಾಗಿ ನಮ್ಮನ್ನು ಸಹಸ್ರಾರು ವರ್ಷಗಳಿಂದ ಆಳುತ್ತವೆ. ಆತ್ಮವೆಂದರೇನು ಎಂಬ ಸನಾತನ ಕಲ್ಪನೆಗೆ ನಾಗಾರ್ಜುನನು ನೈರಾತ್ಯ ಎಂಬ ಕಲ್ಪನೆಯಿಂದ ಪ್ರತಿಕ್ರಿಯಿಸಿದ್ದಾನೆ. ಎಲ್ಲ ಮನುಷ್ಯರ ದುಃಖಗಳಿಗೆ ಈ ದೃಷ್ಟಿವಾದಕ್ಕೆ ಅಂಟಿಕೊಳ್ಳುವುದೆ ಮುಖ್ಯ ಕಾರಣವಾಗಿದೆ. ಎಲ್ಲ ದೃಷ್ಟಿವಾದಗಳಿಂದ ನಮ್ಮನ್ನು ವಿಸರ್ಜಿಸಿಕೊಂಡು ಸ್ವತಂತ್ರವಾಗಿ ಬದುಕನ್ನು ಹೇಗಿದೆಯೋ ಹಾಗೆ ಸ್ವೀಕರಿಸಬೇಕೆಂಬುದು ನೈತಿಕವಾಗಿ ಬದುಕಬೇಕು ಎಂಬುದು ಮಧ್ಯಮಕರ ವಾದವಾಗಿದೆ. ಅಂತೆಯೇ ಈ ಮಧ್ಯಮಕದ ಶೂನ್ಯತೆಯ ಕಲ್ಪನೆಯು ಐದನೆ ಶತಮಾನದಲ್ಲಿದ್ದ ಇನ್ನೋರ್ವ ಬೌದ್ಧ ಮುನಿಯಾದ ಚಂದ್ರಕೀರ್ತಿಯು ನಾಗಾರ್ಜುನನ ಈ ಶೂನ್ಯತಾ ವಾದವನ್ನು ಮುಂದುವರಿಸಿದ. ಈ ಗ್ರಂಥದಲ್ಲಿ ನಾಗಾರ್ಜುನ ಮತ್ತು ಚಂದ್ರಕೀರ್ತಿ ಇವರಿಬ್ಬರೂ ಪ್ರಸ್ತಾವಿಸಿದ ಶೂನ್ಯತೆಯ ತುಲನಾತ್ಮಕ ಅಧ್ಯಯನವನ್ನು ಉದಯಕುಮಾರ್ ಹಬ್ಬು ಅವರು ಮಾಡಿರುತ್ತಾರೆ.
ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ, ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ, ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...
READ MORE