‘ಬಸವಣ್ಣ ಮತ್ತು ಇತರ ದಾರ್ಶನಿಕರು’ ಲೇಖಕ ಉದಯಕುಮಾರ ಹಬ್ಬು ಅವರು ಶರಣ ಪರಂಪರೆಯ ಕುರಿತು ಬರೆದ ಕೃತಿ. 12ನೇ ಶತಮಾನದಲ್ಲಿ ಕರ್ನಾಟಕದ ಬಸವನ ಬಾಗೇವಾಡಿಯಲ್ಲಿ ಬಿಜ್ಜಳನು ಅರಸನಾಗಿರುವ ಕಾಲದಲ್ಲಿ ಬಸವಣ್ಣನ ನೇತೃತ್ವದಲ್ಲಿ ಒಂದು ಮಹಾನ್ ಸಾಮಾಜಿಕ, ಧಾರ್ಮಿಕ ಕ್ರಾಂತಿಯಾಯಿತು. ಶೂದ್ರಾತಿಶೂದ್ರರು, ಅಸ್ಪೃಶ್ಯರು ಮೇಲ್ವರ್ಗದ ಶೋಷಣೆಗೆ ತುಳಿತಕ್ಕೆ ಒಳಗಾಗಿದ್ದರು. ಅವರ ಬದುಕು ಹೀನಾಯವಾಗಿತ್ತು. ಇದನ್ನು ಕಂಡ ಬಸವಣ್ಣನ ಹೃದಯ ವಿಲಿವಿಲಿ ಒದ್ದಾಡಿತು. ಈ ಕೆಳವರ್ಗದ ಜನರನ್ನು ಮೇಲೆತ್ತುವುದು ಹೇಗೆ, ಅವರಿಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಭಾಗ್ಯವನ್ನು ಕಲ್ಪಿಸುವುದು ಹೇಗೆ ಎಂದು ಹಗಲಿರುಳು ಚಿಂತನೆ ನಡೆಸಿದ. ವೇದಗಳನ್ನು ಉಪನಿಷತ್ತುಗಳನ್ನು ಅಧ್ಯಯನ ಮಾಡಿದ. ಆ ಯಾವ ಪವಿತ್ರ ಗ್ರಂಥಗಳಲ್ಲೂ ಜಾತಿ ತಾರತಮ್ಯತೆಯ ಪ್ರಸ್ತಾಪವಿರಲಿಲ್ಲ. ಚತುವರ್ಣಗಳು ಅವನವನ ಗುಣ ಮತ್ತು ಕರ್ಮಗಳಿಂದಲೆ ಹೊರತು ಹುಟ್ಟಿನಿಂದಲ್ಲ ಎಂದು ಅರಿತ. ಈ ಮೇಲು ಕೀಳನ್ನು ಈ ತಾರತಮ್ಯತೆಯನ್ನು ಮಾಡಿದವರು ತಮ್ಮ ಸ್ವಾರ್ಥ ಮತ್ತು ಲಾಭಕ್ಕಾಗಿ ಮಾಡಿಕೊಂಡ ಹುನ್ನಾರ ಎಂದು ಅರಿತ. ಅದಕ್ಕಾಗಿ ಎಲ್ಲರಿಗೂ ಯಾವ ಜಾತಿ ತಾರತಮ್ಯವಿಲ್ಲದೆ ಮೇಲು-ಕೀಳು, ಸ್ತ್ರೀ ಪುರುಷ ಈ ಯಾವ ಭೇದಗಳನ್ನು ಮಾಡದೆ ಲಿಂಗಧಾರಣೆಯನ್ನು ಮಾಡಿ ಕರಸ್ಥಲ ಲಿಂಗಪೂಜೆಯ ಅನುಷ್ಠಾನವನ್ನು ಪರಿಚಯಿಸಿದ ಹಾಗಾಗಿ ಬಸವಣ್ಣ ಮತ್ತು ಇತರೆ ಶರಣರ ಕುರಿತು ಉದಯಕುಮಾರ ಹಬ್ಬು ಈ ಕೃತಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.