`ಬೀದಿಯ ಬದುಕು’ ಜಯರಾಮ ಹೆಗಡೆ ಅವರ ಜೀವನ ಕಥನ. ಸುಮಾರು ಇಪ್ಪತ್ತು ವರ್ಷಗಳ ಹಿಂದಿನಿಂದಲೂ ತೊಡಗಿಕೊಂಡ ಈ ಬರಹ ಗಜಗರ್ಭವೇ ಆಗಿದ್ದಂತೂ ಸತ್ಯದ ಸಂಗತಿ. ಜಯರಾಮ ಹೆಗಡೆ ಅವರ ಹಿನ್ನೆಲೆ ಅವರ ಜೀವನದಲ್ಲಾದ ಆಗು ಹೋಗುಗಳು ಅವರ ಊರು ಕೇರಿ ಅಲ್ಲಿಯ ಜನ ಹೀಗೆ ಪೂರ್ತಿ ಜೀವನದಲ್ಲಿ ಘಟಿಸಿದ ಘಟನೆಗಳನ್ನು ಒಗ್ಗೂಡಿಸಿ ಈ ಕೃತಿಯ ಮೂಲಕ ಓದುಗರ ಮುಂದಿಟ್ಟಿದ್ದಾರೆ.