ಶತಪತ್ರ

Author : ಆರ್. ಶೇಷಶಾಸ್ತ್ರಿ

Pages 301

₹ 250.00




Year of Publication: 2018
Published by: ಸಾಹಿತ್ಯ ಅಕಾಡೆಮಿ
Address: ರವೀಂದ್ರ ಭವನ, 35, ಫಿರೋಜಶಾಹ ರಸ್ತೆ, ನವದೆಹಲಿ-110 001

Synopsys

‘ಶತಪತ್ರ’ ತೆಲುಗಿನ ಆತ್ಮಕಥನ. ಗಡಿಯಾರಂ ರಾಮಕೃಷ್ಣ ಶರ್ಮ ಅವರ ಆತ್ಮಕಥನವನ್ನು ಆರ್. ಶೇಷಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಡಿಯಾರಂ ರಾಮಕೃಷ್ಣಶರ್ಮರು ಸ್ವಪ್ರಯತ್ನದಿಂದ ತೆಲುಗು, ಸಂಸ್ಕೃತ ಮತ್ತು ಕನ್ನಡ ಭಾಷಾಸಾಹಿತ್ಯಗಳನ್ನು ಕರಗತ ಮಾಡಿಕೊಂಡವರು. ಶಾಸನಗಳು, ವಾಸ್ತುಶಿಲ್ಪ ಮತ್ತು ಮೂರ್ತಿಗಳನ್ನು ಅವುಗಳ ಚಾರಿತ್ರಿಕ, ಸಾಹಿತ್ಯ ಮತ್ತು ಶಾಸ್ತ್ರಗಳ ಹಿನ್ನೆಲೆಯಲ್ಲಿ ಅರಿತವರು. ತಮ್ಮ ಸಮಕಾಲೀನ ಜನರ ಮೌಢ್ಯವನ್ನು ಕಳೆಯಲು ಧರ್ಮಶಾಸ್ತ್ರಗಳನ್ನು ಪುನರ್ ಪರಿಶೀಲಿಸಿದವರು. ಪ್ರಶ್ನಿಸದೆ ಯಾವುದನ್ನು ಅಂಗೀಕರಿಸಬೇಡ, ನಮ್ಮ ವಿನಯ ವಿಧೇಯತೆಗಳು ಸತ್ಯ ಮತ್ತು ಪ್ರಾಮಾಣಿಕತೆಗಳಿಗೆ ಮಾತ್ರ ಮೀಸಲು. ಸಹೇತುಕವಾದ ಸ್ವಾಭಿಮಾನ ನಮ್ಮನ್ನು ಬೆಳೆಸುತ್ತದೆ ಎಂಬುದನ್ನು ನಂಬಿ ಅದರಂತೆ ನಡೆದ ರಾಮಕೃಷ್ಣ ಶರ್ಮರ ಜೀವನಗಾಥೆಯನ್ನು ಈ ಕೃತಿಯ ಮೂಲಕ ಕನ್ನಡಿಗರು ಪರಿಚಯಿಸಿದ್ದಾರೆ.

About the Author

ಆರ್. ಶೇಷಶಾಸ್ತ್ರಿ

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಬಹುಭಾಷಾ ಪಂಡಿತರ ಪರಂಪರೆಗೆ ಸೇರಿದವರು ಡಾ. ಆರ್. ಶೇಷಶಾಸ್ತ್ರಿ. ಅಧ್ಯಾಪಕ, ಲೇಖಕ, ಅನುವಾದಕ, ಸಂಶೋಧಕರಾಗಿ ಅದರದ್ದು ಬಹುಮುಖ ಪ್ರತಿಭೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಶೇಷಶಾಸ್ತ್ರಿಗಳ ಹುಟ್ಟೂರು. ಬೆಂಗಳೂರು ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿ ಪಡೆದ ಅವರು ಸಂಶೋಧಕ ಸಹಾಯಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಆಂಧ್ರಪ್ರದೇಶದ ಅನಂತಪುರದಲ್ಲಿರುವ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಕನ್ನಡ ಅಧ್ಯಾಪಕ, ರೀಡರ್, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಆನಂತರದಲ್ಲಿ ತೆಲುಗು ವಿಭಾಗದ ಮುಖ್ಯಸ್ಥರಾದರು ಜೊತೆಗೆ, ಕುಪ್ಪಂನ ದ್ರಾವಿಡ ವಿವಿಯಲ್ಲಿ ಕನ್ನಡ ಮತ್ತು ಅನುವಾದ ವಿಭಾಗದ ಸ್ಥಾಪಕ ...

READ MORE

Related Books