ಮಹಾದಾಸೋಹ ಪಥಿಕ

Author : ರಘುಶಂಖ ಭಾತಂಬ್ರಾ

Pages 179

₹ 150.00




Year of Publication: 2012
Published by: ವಚನ ಚೇತನ ಪ್ರಕಾಶನ
Address: ವಚನ ಚೇತನ ಪ್ರಕಾಶನ, ಮುಕ್ತಿಧಾಮ ರಸ್ತೆ, ಮಾಧವನಗರ ಬೀದರ್‌-585402

Synopsys

ರಘುನಾಥರು 1997ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಕಿರುಪ್ರಬಂಧದ ಪರಿಷ್ಕೃತ ರೂಪವೇ ‘ಮಹಾದಾಸೋಹ ಪಥಿಕ’. ಲೇಖಕರೇ ಪ್ರಕಾಶಕರಾಗಿರುವ ಈ ಕೃತಿಯು ಕಲಬುರಗಿಯ ಶರಣಬಸವೇಶ್ವರ ಮಠದ 8ನೇ ಪೀಠಾಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪನವರ ಜೀವನ ಸಾಧನೆಯ ಅಧ್ಯಯನದ ಫಲ. ಅಪ್ಪ ಅವರ ದಾಸೋಹ ಜೀವನ, ಶೈಕ್ಷಣಿಕ ಸಾಧನೆ, ಸಮಾಜೋ-ಧಾರ್ಮಿಕ ಸಾಧನೆ ಹಾಗೂ ಸಾಹಿತ್ಯಿಕ ಸಾಧನೆಗಳನ್ನು ಒಳಗೊಂಡ ಪುಸ್ತಕ ಇದು.

ಸಮಗ್ರವಾಗಿ ಅವರ ವ್ಯಕ್ತಿತ್ವವನ್ನು ಕೃತಿ ಕಟ್ಟಿಕೊಡದಿದ್ದರೂ ಅವರ ಬದುಕಿನ ಪ್ರಮುಖ ಘಟನೆ, ಮೌಲಿಕ ವಿಚಾರಗಳನ್ನು ಅರ್ಥಗರ್ಭಿತವಾಗಿ ಹಿಡಿದಿಟ್ಟಿದೆ.

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books