ಡಾ. ಲೀಲಾದೇವಿ ಆರ್. ಪ್ರಸಾದ್ ಅವರು ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಸಾಮಾಜಿಕ ರಾಜಕೀಯ ಜೀವವನ್ನು 1957ರಲ್ಲಿ ಪ್ರಾರಂಭಿಸಿದವರು. ಅಥಣಿ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ ಎಸ್. ಆರ್ ಬೊಮ್ಮಾಯಿ, ಎಚ್.ಡಿ. ದೇವೆಗೌಡ ಹಾಗೂ ಜೆ.ಎಚ್ ಪಟೇಲ್ ಅವರ ಸಂಪುಟದಲ್ಲಿ ಶಿಕ್ಷಣ, ಮಹಿಳಾ ಮತ್ತು ಕಲ್ಯಾಣ ಯುವಜನ ಸೇವೆ, ವಾರ್ತಾ, ಕನ್ನಡ ಸಂಸ್ಕೃತಿ, ಸಣ್ಣ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದವರು. ಇವರು ಸಾಹಿತ್ಯ ಲೋಕದಲ್ಲಿ ಗಣನೀಯವಾದ ಕಾಣಿಕೆಯನ್ನು ನೀಡಿದರು. ಪ್ರಬಂಧ, ಕಾದಂಬರಿ, ಕವನಸಂಕಲನ, ಆತ್ಮಚರಿತ್ರೆ, ನಾಟಕ, ಕಿರುಗ್ರಂಥ ಸೇರಿ ಹಲವಾರು ರೀತಿಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. 20 ನೇ ಶತಮಾನದಲ್ಲಿ ಕರ್ನಾಟಕ ರಾಜಕೀಯ ಮಹಿಳೆ, ಸಂಜೀವಿನಿ, ಗಂಗಾಬಿಕೆ, ಸಾಹೇಬರ ಮಗಳು, ಹೆಣ್ಣು ಮೇಲಿನ ಹೆಣ್ಣು, ಮೊದಲಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಡಾ.ವೈ.ಸಿ. ಕಮಲ ಡಾ. ವೈ.ಸಿ. ಕಮಲ ಅವರು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ. ತುಮಕೂರಿನ ನಾಗವಲ್ಲಿಯಲ್ಲಿ 1967 ಮಾರ್ಚ್ 1 ರಂದು ಜನಿಸಿದರು. ಇದರ ಜೊತೆಗೆ ಸಂಶೋಧನೆ ಹಾಗೂ ಕನ್ನಡ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಭಾರತದಲ್ಲಿ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯ ಆರಂಭಿಕ ಹಂತ-ಒಂದು ವಿಶ್ಲೇಷಣೆ' ಎಂಬ ಪ್ರೌಢ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ದೇಶದ ಆಕಾಶವಾಣಿ ಅರ್‍ಕೈವ್ಸ್‌ಗಾಗಿ ಜಾನಪದ ವೃತ್ತಿ ಗಾಯಕರ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅನೇಕ ರೂಪ ನಾಟಕಗಳನ್ನು ನಡೆಸಿ ಆಕಾಶವಾಣಿಯ ಮೂಲಕ ಪ್ರಸಾರ ಮಾಡಿದ್ದಾರೆ. ...
READ MORE