‘ಕಾವ್ಯಾನಂದ ಸಿದ್ಧಯ್ಯ ಪುರಾಣಿಕ’ ಸಿವಿಜಿ ಪಬ್ಲಿಕೇಷನ್ಸ್ ನ ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲೆಯಲ್ಲಿ ಪ್ರಕಟವಾದ ಕೃತಿ. ಅಧಿಕಾರದಲ್ಲಿದ್ದರೂ ಗೋಕಾಕ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಲ್ಲದೆ, ಡಾ. ಸರೋಜಿನಿ ಮಹಿಷಿ ಸಮಿತಿ, ಕನ್ನಡಗಡಿಸಮಿತಿ, ಕನ್ನಡ ಪ್ರಾಧಿಕಾರದ ಸದಸ್ಯರಾಗಿ ಕನ್ನಡದ ಹಿತ ಕಾಯುವಲ್ಲಿ ವಿಶೇಷ ಆಸಕ್ತಿವಹಿಸಿದವರು ಸಿದ್ದಯ್ಯ ಪುರಾಣಿಕ, ತಹಸೀಲ್ದಾರರಾಗಿ ಆಯ್ಕೆಗೊಂಡಾಗ ಮಾಸ್ತಿಯವರು ‘ಕನ್ನಡಕ್ಕಾದ ನಷ್ಟ’ ಎಂದು ನುಡಿದಾಗ, “ನಾನು ಕನ್ನಡದ ಕೈಬಿಡುವುದಿಲ್ಲ, ಕೈಲಾದಷ್ಟು ಸಾಹಿತ್ಯ ಸೇವೆ ಮಾಡುತ್ತೇನೆ” ಎಂದು ನುಡಿದಂತೆ ನಡೆದು, ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು ‘ಕಾವ್ಯಾನಂದ’ ಕಾವ್ಯನಾಮದ ಸಿದ್ಧಯ್ಯ ಪುರಾಣಿಕರು.
ಅವರ ಬದುಕು ಬರಹದ ಕುರಿತಾಗಿ ಲೇಖಕ ಬೆ.ಗೋ. ರಮೇಶ್ ಅವರು ಅರ್ಥಪೂರ್ಣವಾಗಿ ರಚಿಸಿರುವ ಕೃತಿಯಿದು. ಮಕ್ಕಳಿಗೆ ನಾಡು-ನುಡಿಗಾಗಿ ಹೋರಾಡಿದವರ ಕುರಿತು ಅರಿವು ಮೂಡಿಸುವ ಸಲುವಾಗಿ ಈ ಕೃತಿ ರಚಿತವಾಗಿದೆ.
ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...
READ MORE