ಶಿವಬಸವ ಗಿರಿಮಲ್ಲನವರ ಅವರು ಹಿರಿಯ ನ್ಯಾಯವಾದಿ, ನ್ಯಾಯಾಧೀಶ ಕೋ. ಚೆನ್ನಬಸವಪ್ಪ ಅವರ ಜೀವನ ಸಾಧನೆಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕದಲ್ಲಿ ಹದಿನೈದು ಅಧ್ಯಾಯಗಳಿವೆ. ನಿವೃತ್ತ ನ್ಯಾಯಾಧೀಶರಾದ ಕೋ. ಚೆನ್ನಬಸಪ್ಪನವರ ಜೀವನ -ಸಾಧನೆಯನ್ನು ಚಿತ್ರಿಸುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಕೋ.ಚೆ. ಅವರು ವಕೀಲರಾಗಿ, ನ್ಯಾಯಾಧೀಶರಾಗಿ, ಬರಹಗಾರರಾಗಿ, ಏಕೀಕರಣ ಮತ್ತಿತರ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ನಾಡಿನ ಸಮಸ್ಯೆಗಳಿಗೆ ಪ್ರತಿಸ್ಪಂದನೆ ನೀಡುತ್ತ ಬಂದಿರುವ ಹಿರಿಯರಾದ ಕೋ. ಚೆನ್ನಬಸಪ್ಪನವರನ್ನು ಕುರಿತ ಸಂಕ್ಷಿಪ್ತ ನಿರೂಪಣೆ ಇಲ್ಲಿದೆ. ಕೋ.ಚೆ. ಅವರು ಬಸವಣ್ಣ, ವಿವೇಕಾನಂದ, ಅರವಿಂದ ಮತ್ತು ಕುವೆಂಪು ಅವರಿಂದ ಪಡೆದ ಪ್ರೇರಣೆಗಳನ್ನೂ ವಿಶ್ಲೇಷಿಸುತ್ತದೆ.