ಸಿಖ್ ಧರ್ಮದ ಸಂಸ್ಥಾಪಕರಾದ “ಗುರುನಾನಕ್” ರವರು ಹಿಂದೂ, ಮುಸ್ಲಿಮರ ಭಾವೈಕ್ಯತೆಗಾಗಿ ದುಡಿದ ಮಹನೀಯ ವ್ಯಕ್ತಿ. ಇವರು ವಿಶ್ವ ಭ್ರಾತೃತ್ವವನ್ನು ಸಾರಿ ಸರ್ವೇಜನಾ ಸುಖಿನೋ ಭವಂತು ಎಂಬುವುದರ ಮೂಲಕ ವಿಶ್ವ ಶಾಂತಿ, ಸೌಹಾರ್ದತೆಯನ್ನು ಸಾರಿದವರು. ಮಹಾಪುರುಷರಾದ ಗುರುನಾನಕ್ ಅವರ ಬಗ್ಗೆ, ದಾರ್ಶನಿಕರ ಜೀವನ ಚರಿತ್ರೆಯ ಓದು, ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಬಹು ಅಗತ್ಯವಾಗಿದೆ. ಹಿರಿಯರು ಬದುಕಿದ ಮಾರ್ಗ ಕಿರಿಯರ ಬದುಕಿಗೆ ಆದರ್ಶವಾಗುತ್ತದೆ ಎಂಬ ಮಾತನ್ನು ಡಾ.ಡಿ.ಬಿ.ರಾಮ ಚಂದ್ರಾಚಾರ್ ರವರು ಈ ಕೃತಿಯ ಮೂಲಕ ಸ್ಪಷ್ಟ ಪಡಿಸಿದ್ದಾರೆ.