ಗಂಗಾಧರ ಚಿತ್ತಾಲ, ಮಾನವೇಂದ್ರರಾಯ ಅವರಂತಹ ದಿಗ್ಗಜರಿಂದ ಪ್ರಭಾವಿತರಾದ ಶಾಂತಿನಾಥ ದೇಸಾಯಿ ನವ್ಯ ಕಾಲಘಟ್ಟದ ಪ್ರಮುಖ ಲೇಖಕ. ‘ಮುಕ್ತಿ', ‘ಮಂಜುಗಡ್ಡೆ’, ‘ಕ್ಷಿತಿಜ’, ‘ಕೂರ್ಮಾವತಾರ’, ‘ವಾಸನೆ’, ‘...ನಿಖಿಲವಾದದ್ದು’ಅವರ ಕೆಲವು ಸಾಹಿತ್ಯಕ ತೆನೆಗಳು. ಅವರ ಸಾರಸ್ವತ ಲೋಕದ ಸಾಧನೆ ಕುರಿತಂತೆಯೇ ಹಲವು ಅಧ್ಯಯನಗಳು ನಡೆದಿವೆ.
ನವ್ಯ ಚಳವಳಿಯ ಪ್ರಮುಖ ಲೇಖಕ ಶಾಂತಿನಾಥ ದೇಸಾಯಿ ಅವರನ್ನು ಕುರಿತು ಹೆಸರಾಂತ ವಿಮರ್ಶಕ ಜಿ.ಎಸ್. ಆಮೂರ ಅವರು ಬರೆದ ಕೃತಿ ಇದು.
ದೇಸಾಯಿಯವರ ಸಾಹಿತ್ಯದ ಕುರಿತಾದ ವಿವರಣೆಗಳಿವೆ ಜೊತೆಗೆ ಶಾಂತಿನಾಥ ದೇಸಾಯಿಯವರ ಜೀವನ, ಸೈದ್ಧಾಂತಿಕ ನಿಲುವುಗಳನ್ನೂ ತಿಳಿಸಲಾಗಿದೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE