ರಾಷ್ಟ್ರ ಕವಿ, ಕಾದಂಬರಿಕಾರ, ಜ್ಞಾನಪೀಠ ಪುರಸ್ಕೃತ ಕುವೆಂಪು ಅವರ ಜೀವನಮಾನ ಸಾಧನೆ-ಬದುಕು-ಸಾಹಿತ್ಯಕ ನಂಟು ಹಾಗೂ ಅವರ ಕೃತಿಗಳ ಕುರಿತ ಒಂದು ಸಂಕ್ಷಿಪ್ತ ನೋಟವನ್ನು ಲೇಖಕ ಟಿ. ಎಸ್. ಗೋಪಾಲ್ ಅವರು ತೆರೆದಿಟ್ಟಿದ್ದಾರೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದ ಗರಿಮೆ ಇವರದು. ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕ ನಾ. ಸೋಮೇಶ್ವರ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ಲೇಖಕ ಟಿ. ಎಸ್. ಗೋಪಾಲ್ ಅವರ ಹೆಸರು ತಿರು ಶ್ರೀನಿವಾಸಾಚಾರ್ಯ ಗೋಪಾಲ್. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (2013) ದೊರೆತಿದೆ. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಹಾಗೂ ಎಂ. ಎ. ಪದವಿ (ಚಿನ್ನದ ಪದಕ) ಪಡೆದಿರುವ ಅವರು ದಕ್ಷಿಣ ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅವರು ...
READ MORE