ಟಿ.ಆರ್ ಶಾಮಣ್ಣ

Author : ಎಲ್. ಎನ್. ಮುಕುಂದರಾಜ್

Pages 253

₹ 20.00




Year of Publication: 2004
Published by: ಕರ್ನಾಟಕದ ವಿಧಾನ ಮಂಡಲದ ಗ್ರಂಥಾಲಯ ಸಮಿತಿ
Address: ಕರ್ನಾಟಕದ ವಿಧಾನ ಮಂಡಲದ ಗ್ರಂಥಾಲಯ ಸಮಿತಿ ವಿಧಾನಸೌಧ , ಬೆಂಗಳೂರು – 560001

Synopsys

ಕರ್ನಾಟಕದ ವಿಧಾನ ಮಂಡಲದ ಗ್ರಂಥಾಲಯ ಸಮಿತಿಯು ಆಯೋಜಿಸಿದ, ಪ್ರತಿಭಾವಂತ ಸಂಸದೀಯ ಪುಟಗಳ ಬದುಕು ಬರಹ ಮಾಲಿಕೆಯಡಿಯಲ್ಲಿ ಪ್ರಕಟಿಸಲಾದ ಕೃತಿ ’ಟಿ. ಆರ್‍. ಶಾಮಣ್ಣ’.

ಪ್ರಸಿದ್ದ ರಾಜಕಾರಣಿ ಟಿ.ಆರ್‍.ಶಾಮಣ್ಣ ಅವರನ್ನು ಕುರಿತಾದ ಈ ಪುಸ್ತಕವು ಅವರ ಬದುಕು, ರಾಜಕಾರಣದ ನಿಲುವು, ವ್ಯಕ್ತಿತ್ವವನ್ನು ಕುರಿತು ಪರಿಚಯಿಸುವಂತದ್ದು.

ಶಾಮಣ್ಣನವರ ರಾಜಕೀಯ ಸೇವೆಗಳನ್ನು ಕುರಿತಾದ ಹಲವಾರು ಲೇಖನಗಳನ್ನು ಈ ಪುಸ್ತಕ ಒಳಗೊಂಡಿದೆ.  ಮಾರಾಟದ ತೆರಿಗೆ ಕುರಿತು ಚರ್ಚೆ, ಖಾಸಗೀ ನಿರ್ಣಯದ ಮೇಲಿನ ಚರ್ಚೆ , ಸಂವಿಧಾನ ತಿದ್ದುಪಡಿ ಕುರಿತು, ರಾಜ್ಯದ ಆರ್ಥಿಕ  ಪ್ರಗತಿ ಕುರಿತು ಚರ್ಚೆ, ಗೇಣೀದಾರರ ಸಮಸ್ಯೆಗಳು, ಸಹಕಾರ ಇಲಾಖೆಯ ಬೇಡಿಕೆಯ ಮೇಲಿನ ಚರ್ಚೆ, ಭೂ ಸುಧಾರಣಾ ಋಣ ಪರಿಹಾರ ಕಾಯ್ದೆ, ಹೀಗೆ ಹಲವಾರು ಕಾರ್ಯ ಸಾಧನೆಗಳ ಬಗ್ಗೆ ಈ ಕೃತಿ ವಿವರಿಸುತ್ತದೆ.

 

About the Author

ಎಲ್. ಎನ್. ಮುಕುಂದರಾಜ್

ಎಲ್. ಎನ್. ಮುಕುಂದರಾಜ್  ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...

READ MORE

Related Books