‘ಪಂಡಿತ ಚೆ.ಎ. ಕವಲಿ’ ಸಿವಿಜಿ ಪಬ್ಲಿಕೇಷನ್ಸ್ ನ ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲೆಯಲ್ಲಿ ಪ್ರಕಟವಾದ ಕೃತಿ. ಕವಲಿಯವರು ತಮ್ಮ ನಿಘಂಟು "ಸಚಿತ್ರ ಕನ್ನಡ ಕಸ್ತೂರಿ ಕೋಶ"ಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಅಲ್ಲದೇ ಶಾಲಾ ಶಿಕ್ಷಕರಾಗಿದ್ದ ಪಂಡಿತ ಚೆ.ಎ.ಕವಲಿಯವರು ಮಕ್ಕಳ ಸಾಹಿತ್ಯದಿಂದಲೂ ಗುರುತಿಸಿಕೊಂಡಿದ್ದಾರೆ. ನಾಡು ನುಡಿಯ ಬಗ್ಗೆ ಹೊಸ ತಲೆಮಾರುಗಳಿಗೆ ತಿಳಿಸುವ ಸಲುವಾಗಿ ಪ್ರೊ. ರಾಮಚಂದ್ರ ವಿ. ಪಾಟೀಲರು ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಪಂಡಿತ ಚೆ.ಎ. ಕವಲಿ ಅವರ ಬದುಕು-ಬರಹದ ಕುರಿತಾದ ಮಾಹಿತಿಗಳಿವೆ.
ರಾಮಚಂದ್ರ ಪಾಟೀಲ ಅವರು ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಕಗಲಗೊಂಬ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕಗಲಗೊಂಬದಲ್ಲಿ, ಮಾಧ್ಯಮಿಕ ಮತ್ತು ಪದವಿ ಶಿಕ್ಷಣವನ್ನು ಬಾಗಲಕೋಟೆಯಲ್ಲಿ, ಬಿ.ಇ.ಡಿ. ಪದವಿಯನ್ನು ಜಮಖಂಡಿಯಲ್ಲಿ, ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಡೆದರು. ಶಿಕ್ಷಕರಾಗಿ ಸೇವೆ ಸಲ್ಲಿಸುವ ಹಂಬಲದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸೇರಿ, ಬಾಗಲಕೋಟೆ, ಮುಧೋಳ ಮತ್ತು ಧಾರವಾಡದ ಪ್ರತಿಷ್ಠಿತ ಸರಕಾರಿ ಟ್ರೇನಿಂಗ್ ಕಾಲೇಜು (DIET) ನಲ್ಲಿ ಸೇವೆ ಸಲ್ಲಿಸಿದರು. ಜೊತೆಗೆ ಟ್ರೇನಿಂಗ್ ಕಾಲೇಜಿನ ಮುಖವಾಣಿಯಾದ 'ಜೀವನ ಶಿಕ್ಷಣ' ಶೈಕ್ಷಣಿಕ ಮಾಸಪತ್ರಿಕೆಯ ಸಂಪಾದಕರಾಗಿ ಸುಮಾರು ಹದಿನೈದು ವರ್ಷ ಸೇವೆ ಸಲ್ಲಿಸಿದರು. ...
READ MORE