ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ

Author : ನೀಲಾವರ ಸುರೇಂದ್ರ ಅಡಿಗ

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಹಾರ್ಯಾಡಿ ಚಂದ್ರಶೇಖರ ಕೆದ್ಲಾಯರು ಭಾವಗೀತೆಗಳ ಸಿರಿಕಂಠ ಹಾಗೂ ಗಮಕಕ್ಕಾಗಿ ಜನಪ್ರಿಯರಾದವರು. ಚಂದ್ರಶೇಖರ ಕೆದ್ಲಾಯರ ಹಾಡು ಕೇಳಿದಾಕ್ಷಣ ಅರಿವಿಗೆ ಬರುವುದು ಅವರ ಗಾಯನದಲ್ಲಿ ಎದ್ದು ತೋರುವ ಅಪಾರ ಆತ್ಮವಿಶ್ವಾಸ, ಎತ್ತರದ ದನಿ, ಸ್ಪಷ್ಟ ಉಚ್ಚಾರ, ಸ್ವರ ಭಾರ ಏರಳಿತದೊಂದಿಗೆ ಹಾಡುತ್ತಿದ್ದರೆ ಹೊಸಲೋಕಕ್ಕೆ ಕಾಲಿಟ್ಟ ಅನುಭವವಾಗುತ್ತದೆ. ಕನ್ನಡ ಅಧ್ಯಾಪಕರು ಹೇಗಿರಬೇಕೆಂಬುದಕ್ಕೆ ಕೆದ್ಲಾಯರೆ ಉದಾಹರಣೆ ಯಾಗಿದ್ದಾರೆ. ನಾಡಿನಾದ್ಯಂತ ಸಾವಿರಾರು ಕಾಠ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ಇವರು ಅನನ್ಯ ಸುಗಮ ಸಂಗೀತ ಪ್ರತಿಭೆ. ಅವರ ಜೀವನ ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ. ಕಾಂತಾವರ ಕನ್ನಡ ಸಂಘವು ಪ್ರಕಟಿಸಿರುವ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ 257ನೇ ಕೃತಿಯಾಗಿದೆ.

About the Author

ನೀಲಾವರ ಸುರೇಂದ್ರ ಅಡಿಗ
(21 September 1961)

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ನೀಲಾವರ ಸುರೇಂದ್ರ ಅಡಿಗರು ಶಿಕ್ಷಣ, ಸಾಹಿತ್ಯ, ಸಂಘಟನೆಯಲ್ಲಿ ತಮ್ಮ ಛಾಪು ಮೂಡಿಸಿದವರು. ಅವರ ಐವತ್ತೈದು ಪುಸ್ತಕಗಳು ಪ್ರಕಟವಾಗಿವೆ. ಶೈಕ್ಷಣಿಕವಾಗಿ ಪಠ್ಯಪುಸ್ತಕರಹಿತ ಕಲಿಕೆಯ ಚಿಂತನೆ, ಅನುಷ್ಠಾನವೇ ಮೊದಲಾದ ಪ್ರಗತಿಪರ ಚಿಂತಕರು, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಸಾಹಿತಿಗಳಾಗಿ, ಉತ್ತಮ ವಾಗ್ಮಿಯೂ ಹೌದು. ಸಂಘಟಕರಾಗಿ ನಾಡಿನಾದ್ಯಂತ ಶಿಕ್ಷಕರಿಗೆ, ಸಹೃದಯರಿಗೆ ಪರಿಚಿತರು. ಇವರ ’ಕಿಟ್ಟಜ್ಜಿ ಮತ್ತು ಹವಿಸ್ಸು ಪಾತ್ರೆ’ ಈ ಪುಸ್ತಕ ಹತ್ತು ವರ್ಷಗಳ ಕಾಲ ICSE ಶಾಲೆಯ ಹತ್ತನೆಯ ತರಗತಿಗೆ ಪಠ್ಯಪುಸ್ತಕವಾಗಿತ್ತು. ಬೋಧನೆ ಮತ್ತು ಕಲಿಕೆಯ ಸಾಮಗ್ರಿ ’ಹೊಸ ದಿಶೆಯ ಬೆಳಕು’ ಕೃತಿಯನ್ನು ...

READ MORE

Related Books