ಬಡತನದ ಕುಟುಂಬದಲ್ಲಿ ಜನಿಸಿದ ಬಸವರಾಜ ಕಟ್ಟೀಮನಿ ರವರು ಕನ್ನಡ ನಾಡುನುಡಿಗಾಗಿ ಹೋರಾಡಿದ ಮಹಾ ಹೋರಾಟಗಾರರಾಗಿದ್ದಾರೆ. ಪತ್ರಕರ್ತ, ಕಾದಂಬರಿಕಾರ, ಸಾಹಿತಿ, ಶಾಸಕ, ಹೋರಾಟಗಾರರಾಗಿ ಹಲವು ಈಗೆ ಬಹುಮುಖವಾಗಿ ಗುರುತಿಸಿಕೊಂಡ ಇವರು ಕನ್ನಡಕ್ಕಾಗಿ ಅಪಾರ ಸೇವೆಗೈದಿದ್ದಾರೆ. ಸ್ವಾತಂತ್ರ್ಯ ಚಳವಳಿ ಮತ್ತು ಸಾಮಾಜಿಕ ಕಥಾನಕಗಳನ್ನು ಆಧರಿಸಿ ಜನರಲ್ಲಿ ಜಾಗೃತಿ ಮೂಡಿಸುವಂತಹ, ಸ್ವಾಭಿಮಾನವನ್ನು ಬೆಸೆಯುವಂತಹ ಕಾದಂಬರಿ, ಕಥೆಗಳನ್ನು ರಚಿಸಿ ಏಕೀಕರಣ ಮತ್ತು ಭಾರತ ಬಿಡುಗಡೆ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕಕೊಂಡವರು. ಹೋರಾಟ ತುಂಬಿದ ಇವರ ಜೀವನಗಾಥೆಯನ್ನು ಕೊತ್ತಲ ಮಹಾದೇವಪ್ಪನವರು ಈ ಕೃತಿಯಲ್ಲಿ ವಿವರಗಳನ್ನುಒದಗಿಸಿದ್ದಾರೆ.