ಕವಿ-ಲೇಖಕ ಎಲ್.ಎನ್. ಮುಕುಂದರಾಜ್ ಅವರು ಬರೆದಿರುವ ‘ನಾಲ್ವರು ನಾಯಕರು ‘ ಪುಸ್ತಕವು ಎಸ್. ಚನ್ನಬಸವಯ್ಯ, ಕೆ. ಎಚ್. ರಂಗನಾಥ್, ಟಿ.ಆರ್.ಶಾಮಣ್ಣ, ಎಸ್.ಬಂಗಾರಪ್ಪ ಇವರುಗಳ ಜೀವನ ಸಾಧನೆ, ಮತ್ತು ಕೊಡುಗೆಗಳನ್ನು ಪರಿಚಯಿಸುತ್ತದೆ.
ಕರ್ನಾಟಕದ ಶಿಕ್ಷಕರು ಮತ್ತು ನೌಕರರ ಕಷ್ಟ ಕಾಲದ ಬಂಧು ಎಸ್. ಚನ್ನಬಸವಯ್ಯನವರನ್ನು ಸ್ವತಃ ಶಿಕ್ಷಕನಾಗಿ, ಶಾಸಕನಾಗಿ, ಸಂಘಟಕನಾಗಿ ದುಡಿದು, ನಾಡಿನ ಉದ್ದಗಲಕ್ಕೂ ಪ್ರಸಿದ್ಧರಾದವರು. ಸ್ವಾತಂತ್ಯ್ರ ಹೋರಾಟಗಾರ, ಸ್ವಾತಂತ್ಯ್ರೋತ್ತರ ಕನ್ನಡ ನಾಡನ್ನು ನಿರ್ಮಿಸಿದ ನಾಡಶಿಲ್ಪಿಗಳಲ್ಲಿ ಪ್ರಮುಖರಾದವರು ಕೆ. ಎಚ್. ರಂಗನಾಥ್. ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ, ವಿಧಾನ ಸಭೆ ಹಾಗೂ ಲೋಕ ಸಭೆಗಳ ಸದಸ್ಯರಾಗಿ ದುಡಿದವರು ಶಾಮಣ್ಣ ಟಿ.ಆರ್., ಮಾಜೀ ಮುಖ್ಯಮಂತ್ರಿ, ಎಸ್. ಬಂಗಾರಪ್ಪ ಅವರ ಜೀವನ ಸಾಧನೆ, ಅವರ ನಿಲುವುಗಳನ್ನು ಈ ಕೃತಿ ತಿಳಿಸುತ್ತದೆ. ಕರ್ನಾಟಕ ಕಂಡ ಅಪ್ಪಟ ಮನುಷ್ಯ ಪ್ರೇಮಿ, ರಾಜಕಾರಣಿಗಳು, ಬಡವರ ಕಷ್ಟಸುಖಗಳಿಗೆ ನೆರವಾದವರು ಈ ನಾಲ್ವರು ನಾಯಕರು. ಇವರುಗಳ ವ್ಯಕ್ತಿಚಿತ್ರವನ್ನು ವಿವರವಾಗಿ ನೀಡಲಾಗಿದೆ.
ಎಲ್. ಎನ್. ಮುಕುಂದರಾಜ್ ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...
READ MORE