ಹಿರಿಯ ಸ್ವಾತಂತ್ಯ್ರಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಕನ್ನಡದ ಸಾಕ್ಷಿಪ್ರಜ್ಞೆಯಂತೆ ಸಮಾಜಕ್ಕಾಗಿ ದುಡಿದವರು. ಸ್ವಾತಂತ್ಯ್ರ ಚಳವಳಿಗೂ ಆಧುನಿಕ ಭಾರತಕ್ಕೂ ಕೊಂಡಿಯಂತಿರುವ ಅವರು ಕನ್ನಡಿಗರು ಎಂಬುದು ಕನ್ನಡದ ಹಿರಿಮೆ ಕೂಡ. ಅವರ ಬದುಕಿನ ಹೇಗಿತ್ತು ಎಂಬುದು ಸಹಜವಾಗಿಯೇ ಅನೇಕರ ಕುತೂಹಲ ಕೆರಳಿಸುತ್ತದೆ. ಅಂತಹ ಪ್ರಶ್ನೆಗೆ ಉತ್ತರ ರೂಪ ಎಂಬಂತಿದೆ ಅವರ ಈ ಜೀವನ ಚರಿತ್ರೆ.
ಈ. ಬಸವರಾಜು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ಬಹುಮುಖಿಯಾಗಿ ತೊಡಗಿಸಿಕೊಂಡಿರುವ ಇವರು ಹವ್ಯಾಸಿ ಬರಹಗಾರರಾಗಿದ್ದಾರೆ. ವೈಜ್ಞಾನಿಕ ಚಿಂತನೆ ಹಾಗೂ ವೈಚಾರಿಕತೆಗೆ ಸಂಬಂಧಿಸಿದ ಇವರ ಲೇಖನಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. - ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ವಿಚಾರವಾದಿಗಳ ವೇದಿಕೆ-ಹೀಗೆ ನಾನಾ ಸಂಘಟನೆ ಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಇವರು ಖಗೋಳಯಾನ, ಸುವರ್ಣ ವಿಜ್ಞಾನೋತ್ಸವ, ಜನರೆಡೆಗೆ ವಿಜ್ಞಾನ ಜಾಥಾ, ಜೀವ ವೈವಿಧ್ಯ ದಾಖಲಾತಿ, ಇನ್ನೂ ಮುಂತಾದ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದ್ದಾರೆ. ’ಶಿಕ್ಷಣ ಶಿಲ್ಪಿ' ಎಂಬ ಶೈಕ್ಷಣಿಕ ಮಾಸಪತ್ರಿಕೆಯ ಪ್ರಕಾಶನದ ಜವಾಬ್ದಾರಿಯನ್ನು ...
READ MORE