ರೈತ ಹೊಟ್ಟೆ ತುಂಬ ಉಂಡು ಸಮಾಧಾನದಿಂದ ಮಲಗಿದ ದಿನವೇ ದೇಶದ ಪಾಲಿಗೆ ಸುವರ್ಣ ದಿನ ಎನ್ನುತ್ತಾರೆ ಮಹಾತ್ಮ ಜ್ಯೋತಿಬಾ ಫುಲೆಯವರು. ಅವರ ಮಾತು ಇಂದಿಗೂ ಪ್ರಸ್ತುತ. ಜ್ಯೋತಿಬಾ ಫುಲೆಯವರ ಬಗ್ಗೆ ಅಧಿಕೃತವಾಗಿ ಬರೆದವರು ಮರಾಠಿಯ ಹಿರಿಯ ಲೇಖಕ, ಇತಿಹಾಸ ತಜ್ಞರಾಗಿದ್ದ ಧನಂಜಯ ಕೀರ್ ಅವರು. ಕೀರ್ ಅವರು ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂಪರ್ಕದಲ್ಲಿದ್ದರು. ಅಂಬೇಡ್ಕರ್ ಅವರು ಜ್ಯೋತಿಬಾ ಫುಲೆಯವರನ್ನು ಗುರುವೆಂದು ನಂಬಿದ್ದರು ಹಾಗೂ ಅವರು ತೋರಿದ ಮಾರ್ಗದಲ್ಲಿಯೇ ನಡೆದರು. ಹೀಗಾಗಿ ಅಂಬೇಡ್ಕರ್ ಅವರಿಗೆ ಫುಲೆಯವರ ಬಗ್ಗೆ ನಿಖರವಾದ ವಿವರಗಳು ತಿಳಿದಿದ್ದವು. ಅಂಬೇಡ್ಕರ್ ಫುಲೆಯವರ ಬಗ್ಗೆ ಅಧೀಕೃತವಾಗಿ ಹೇಳಬಲ್ಲವರಾಗಿದ್ದರು. ಲೇಖಕ ಧನಂಜಯ ಕೀರ್ ಅವರು ಅಂಬೇಡ್ಕರ್ ಅವರಿಂದ ಮಹಾತ್ಮ ಜ್ಯೋತಿಬಾ ಫುಲೆಯವರ ಜೀವನದ ಬಗ್ಗೆ, ಅವರ ಹೋರಾಟ, ಅವರ ಸಾಮಾಜಿಕ, ಶೈಕ್ಷಣ ಕ ಹಾಗೂ ಸಂಘಟನಾತ್ಮಕ ಕಾರ್ಯಗಳ ಕುರಿತು ನಿಖರವಾದ ವಿವರಗಳನ್ನು ತಿಳಿದುಕೊಂಡರು ಹಾಗೂ ನಿರ್ಭಯವಾಗಿ ಸತ್ಯದುದನ್ನೇ ಬರೆದರು. ಹೀಗಾಗಿ ಕೀರ್ ಅವರು ಮರಾಠಿ ಕೃತಿ ಮಹಾತ್ಮ ಜ್ಯೋತಿಬಾ ಫುಲೆ ತುಂಬ ಮಹತ್ವದ್ದು. ಆ ಕೃತಿಯನ್ನು ಆಧರಿಸಿ ಅದರಲ್ಲಿನ ಮಹತ್ವದ ಅಂಶಗಳನ್ನು ಆಯ್ದುಕೊಂಡು ಈ ಕೃತಿಯನ್ನು ಕಡಿಮೆ ಪುಟದಲ್ಲಿ ಹೆಚ್ಚಿನ ಮಾಹಿತಿ ನೀಡುವ ಉದ್ಧೇಶದಿಂದ ಈ ಕೃತಿಯನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಸದರಿ ಪುಸ್ತಕ ಫಲೆಯವರ ಜೀವನ, ಕಾರ್ಯ, ಸತ್ಯಾಗ್ರಹ ಮತ್ತು ಹೋರಾಟಗಳ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ತುಂಬ ಉಪಯುಕ್ತವಾದುದು.
©2024 Book Brahma Private Limited.