ಎಸ್. ಸೂರ್ಯನಾರಾಯಣರಾವ್‌ರವರು ಅಸಂಘಟಿತ ವಲಯದ ಶ್ರಮಿಕರಿಗೂ ಧ್ವನಿಯಾಗುವುದರ ಜೊತೆಗೆ , ಸ್ವಾತಂತ್ರ್ಯ ಆಂಧೋಲನ ಕಾಲದಲ್ಲಿ ವಿದ್ಯಾರ್ಥಿ ಚಳುವಳಿಗೆ ಧುಮುಕುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರು. ಆನಂತರ ರಾಜ್ಯದ ವಿವಿದೆಡೆ ಕಾರ್ಮಿಕರನ್ನು ಸಂಘಟಿಸಿ, ಶ್ರಮಿಕ ಹೋರಾಟಗಳಿಗೆ ದಿಟ್ಟ ನಾಯಕತ್ವ ಒದಗಿಸಿಕೊಟ್ಟವರಲ್ಲಿ ಪ್ರಮುಖರು. ತಾವು ನಂಬಿದ ತತ್ವಗಳಿಗೆ ಬದ್ಧರಾಗಿ ಶ್ರಮಜೀವಿ ವರ್ಗದ ಅಭ್ಯುದಯಕ್ಕಾಗಿ ಅವಿಶ್ರಾಂತವಾಗಿ ಪರಿಶ್ರಮಿಸಿದ ಸೂರ್ಯರವರ ನಿತ್ಯಹೋರಾಟದ ಬದುಕನ್ನು, ಜೀವನ ಸಾಧನೆಯನ್ನು ಎಸ್.ಆರ್. ಆರಾಧ್ಯರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಎಸ್.ಆರ್. ಆರಾಧ್ಯ ಅವರು ಲೇಖಕರು ಹಾಗೂ ಉತ್ತಮ ಅನುವಾದಕರು. ಕೃತಿಗಳು: ಯಶಸ್ಸಿನ ನಿಯಮದ ಸಾರ (ಅನುವಾದಿತ ಕೃತಿ), ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿ ...
READ MORE