ಒಡನಾಡಿ ಅರಸು

Author : ಲಕ್ಷ್ಮಣ ಕೊಡಸೆ

Pages 495

₹ 250.00




Year of Publication: 2016
Published by: ಡಿ. ದೇವರಾಜ ಅರಸು ಜನ್ಮಶತಮಾನೋತ್ಸವ ಸಮಿತಿ
Address: ದೇವರಾಜ ಅರಸು ಭವನ, ಮೂರನೇ ಮಹಡಿ, ಮಿಲ್ಲರ್‍ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತ ನಗರ, ಬೆಂಗಳೂರು-560052

Synopsys

ಕನ್ನಡ ನಾಡು ಕಂಡ ಧೀಮಂತ ರಾಜಕಾರಣಿ ಡಿ.ದೇವರಾಜ ಅರಸು. ಕರ್ನಾಟಕದ ಮುಖ್ಯಮಂತ್ರಿಯಾಗಿ 1972 ರಿಂದ 1980ರ ವರೆಗೆ ನಾಡನ್ನು ಮುನ್ನಡೆಸಿದ ದೇವರಾಜ ಅರಸು ಸಂವಿಧಾನದ ಆಶಯದಂತೆ ಅವರಿಗೆ ಸಮಬಾಳನ್ನು ಕಲ್ಪಿಸಲು ಕೈಗೊಂಡಿದ್ದ ಯೋಜನೆಗಳು ಅವರನ್ನು ನಾಡಿನ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಮಾಡಿವೆ. ದೇವರಾಜ ಅರಸರು ಅನುಸರಿಸಿದ ಸಾಮಾಜಿಕ ನ್ಯಾಯದ ಪರಿಕಲ್ಪನೆ ದೇಶದಲ್ಲಿಯೇ ಅನನ್ಯವಾದದ್ದು. ’ಒಡನಾಡಿ ಅರಸು’ ಕೃತಿಯಲ್ಲಿ ಬೇರೆ ಬೇರೆಯವರು ಅರಸು ಅವರನ್ನು ಕಂಡಂತೆ, ಅದರಲ್ಲೂ ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಅರಸರ ಆಪ್ತರು, ಬಂಧು ಬಳಗ, ಸ್ನೇಹಿತರು ಮೊದಲಾದವರು ಗ್ರಹಿಸಿದಂತೆ ಅರಸರ ವ್ಯಕ್ತಿತ್ವವನ್ನು ಚಿತ್ರಿಸಲಾಗಿದೆ. ಲೇಖಕರಾದ ಲಕ್ಷ್ಮಣ ಕೊಡಸೆ ಹಾಗೂ ಡಾ. ಕೆ. ಷರೀಫಾ ಅವರು ಕೃತಿಯನ್ನು ಸಂಪಾದಿಸಿದ್ದಾರೆ. 

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books