‘ಮದರ್ ತೆರೆಸಾ’ ಜಯಶ್ರೀ ಕಾಸರವಳ್ಳಿ ಅವರು ರಚಿಸಿರುವ ಜೀವನ ಚರಿತ್ರೆ. ವಸಂತ ಪ್ರಕಾಶನ ಪ್ರಕಟಿಸುತ್ತಿರುವ ಈ ವಿಖ್ಯಾತರ ವ್ಯಕ್ತಿಚಿತ್ರ ಮಾಲೆಯಲ್ಲಿ ಧರ್ಮ, ತತ್ವಶಾಸ್ತ್ರ, ಚರಿತ್ರೆ, ವಿಜ್ಞಾನ, ಅರ್ಥಶಾಸ್ತ್ರ, ಪರಿಸರ, ಉದ್ಯಮ ರಾಜಕೀಯ, ಸಮಾಜ ಸುಧಾರಣೆ, ಸಾಹಿತ್ಯ, ಸಂಗೀತ, ಲಲಿತ ಕಲೆ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನೂ ಅದ್ವಿತೀಯ ಸಾಧನೆಗಳನ್ನೂ ಮಾಡಿದ ಮೇಧಾವಿಗಳ ಜೀವಚಿತ್ರಣಗಳಿವೆ. ಈ ಕೃತಿಯಲ್ಲಿ ಮದರ್ ತೆರೆಸಾ ಅವರ ಬಾಲ್ಯದ ದಿನಗಳು, ಆತ್ಮದ ಕರೆ, ತಲೆಯ ಮೇಲೊಂದು ಸೂರು, ನಿರ್ಮಲ ಹೃದಯದ ಸ್ಥಾಪನೆ, ಶಾಂತಿನಗರವೆಂಬ ನೆಮ್ಮದಿಯ ತಾಣ, ಶಿಶುಭವನದ ಸ್ಥಾಪನೆ, ನಿರ್ಮಲ ಕೆನಡಿ ಹೋಮ್, ಪ್ರೀತಿಯೇ ಬಾಳದೀವಿಗೆ, ಇತರ ರಾಷ್ಟ್ರಗಳಲ್ಲಿ, ದೇಶ ವಿದೇಶಗಳ ಸಹಾಯ, ಹೃದಯಾಘಾತ, ಹಾಗೂ ನಡೆದು ಬಂದ ದಾರಿ ಶೀರ್ಷಿಕೆಯಡಿ ಅವರ ಬದುಕಿನ ಮಾಹಿತಿ ಇದೆ.
'ತಂತಿ ಬೇಲಿಯ ಒಂಟಿ ಕಾಗೆ' ಕಥಾ ಸಂಕಲನದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ ಜಯಶ್ರೀ ಕಾಸರವಳ್ಳಿ ಅವರು ಮೊದಲ ಕೃತಿಗೇ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ ಹೀಗೆ ಕೆಲವು ಪ್ರಶಸ್ತಿ ಪಡೆದಿದ್ದಾರೆ. ಮಾರ್ಕೆಸ್ ಸೇರಿದಂತೆ ಹಲವು ಖ್ಯಾತ ಕತೆಗಾರರ ಕತೆಗಳನ್ನು ಜಯಶ್ರೀ ಕನ್ನಡಕ್ಕೆ ಅನುವಾದಿಸಿದ್ದಾರೆ. ನವದೆಹಲಿಯ 'ತುಲಿ ಕಾ' ಪ್ರಕಾಶನದ ಹತ್ತಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಅವರು ಕನ್ನಡೀಕರಿಸಿದ್ದಾರೆ. ...
READ MORE