ಮಾರಿಸ್ ಮೇತರ್‌ಲಿಂಕ್ ಹುಟ್ಟಿದ್ದು 1862ನೇ ಇಸವಿ ಆಗಸ್ಟ್ 29ರಂದು. ಬೆಲ್ಜಿಯಂನ ಘೆಂಟ್ ನಗರದಲ್ಲಿ. ಮಾರಿಸ್ ಮೇತರ್ ಲಿಂಕ್”, ಈತ ಫ್ರೆಂಚ್ ಭಾಷೆಯಲ್ಲಿ ಬೆಲ್ಜಿಯಂ ದೇಶದ ಸಾಹಿತ್ಯವನ್ನು ಸಮೃದ್ದಗೊಳಿಸಿದನು..ಬೆಲ್ಜಿಯಂ ದೇಶವು ಈತನಿಗೆ ೧೯೧೧ ರಲ್ಲಿ ನೋಬೆಲ್ ಸಾಹಿತ್ಯ ಬಹುಮಾನ ನೀಡಿ ಗೌರವಿಸಿತು. ಈತನು ಅಪಾರ ಅನುಭವ ಜಗತ್ತನ್ನು ಹೊಂದಿದ್ದರು ಮತ್ತು ವಿಶ್ವ ಹಲವು ನಿಗೂಢತೆಗಳ ಅರಿವು ಈತನಿಗೆ ಇತ್ತು. ಈತನು ತನ್ನ ಬರಹಗಳಲ್ಲಿ ಅನುಭವದ ಜೊತೆಗೆ ಬೆಳಕಿನ ಕಾಣಿಕೆಯನ್ನು ಒಳಪಡಿಸಿದ್ದಾರೆ.ಮುಖ್ಯವಾಗಿ ಈತನ ನಾಟಕಗಳಲ್ಲಿ ಕಾಣಸಿಗುವುದು ಏನೆಂದರೆ ಬೆಳಕಿನ ಕಾಣಿಕೆಯನ್ನು ಅನನ್ಯವಾಗಿ ವ್ಯಕ್ತಪಡಿಸಿದ್ದಾನೆ. ಈತ ಬರೆದ ಹಲವು-ಪ್ರಸಿದ್ಧ ನಾಟಕಗಳಲ್ಲಿ “ ಮರಿಯೇ ಮುಗ್ದಲೀನೆ”, ಕೂಡ ಒಂದು. ಈ ನಾಟಕದ ಪೂರ್ಣ ಅನುವಾದವನ್ನು, ಅದರೊಂದಿಗೆ ಬೇರೆ ನಾಟಕಗಳ , ಅವರು ಬರೆದ ಕೃತಿಗಳ ಪರಿಚಯವನ್ನುನ ಲೇಖಕಿ ಸಂಧ್ಯಾರವರು ಈ ಕೃತಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.